ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ               

(ನ್ಯೂಸ್ ಕಡಬ) newskadaba.com ಹಾವೇರಿ, ಡಿ. 22. ಅವಮಾನ ತಾಳಲಾರದೇ ಒಂದೇ ಕುಟುಂಬದ ಮೂವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ಸಂಭವಿಸಿದೆ.

ಮೃತಪಟ್ಟವರನ್ನು ಭಾರತಿ (38), ಕಿರಣ್ (24) ಹಾಗೂ ಸೌಜನ್ಯ (20) ಎಂದು ಗುರುತಿಸಲಾಗಿದೆ. ಭಾರತಿಯ ಕಿರಿಯ ಮಗ ಕಿರಣ್ ಯುವತಿಯೊಬ್ಬಳನ್ನು ಪ್ರೀತಿಸಿರುವುದೇ ಆತ್ಮಹತ್ಯೆಗೆ ಮೂಲ ಕಾರಣ ಎಂದು ಶಂಕಿಸಲಾಗಿದೆ. ಯುವತಿಯ ಮನೆಯವರು ಕಿರಣ್ ಕುಟುಂಬಸ್ಥರಿಗೆ ಹೊಡೆದಿದ್ದು, ಅಲ್ಲದೇ ನಿಮ್ಮ ಮಗ ನಮ್ಮ ಹುಡುಗಿಯನ್ನು ಓಡಿಸಿಕೊಂಡು ಹೋಗಿದ್ದಾನೆ ಎಂದು ಹಿಂಸೆ ನೀಡುತ್ತಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಮೃತರ ಸಂಬಂಧಿಗಳು ಆರೋಪಿಸಿದ್ದಾರೆ.

 

 

Scroll to Top