(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ. 22. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು 107 ಔಷಧಗಳ ಬೆಲೆಯನ್ನು ಇಳಿಕೆ ಮಾಡಿ, ದೇಶದಾದ್ಯಂತ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.
ಈ ವರ್ಷ ಎರಡನೇ ಬಾರಿಗೆ ಪ್ಯಾರಸಿಟಮಲ್ ಸೇರಿ ಇತರ ಅಗತ್ಯ ಔಷಧಿಗಳ ಬೆಲೆ ಕಡಿಮೆ ಮಾಡಲಾಗಿದ್ದು, ಮಾಂಟೆಲುಕಾಸ್ಟ್ ಮತ್ತು ಮೆಟ್ಫಾರ್ಮಿನ್ ನಂತಹ ಕೆಲವು ಔಷಧಿಗಳ ಬೆಲೆಗಳನ್ನ ಹೆಚ್ಚಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ನ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್, ‘ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಪ್ಯಾರಾಸಿಟಮಲ್’ನಂತಹ ಕೆಲವು ಔಷಧಿಗಳು ಈಗಾಗಲೇ ಕಡಿಮೆ ಬೆಲೆಗಳನ್ನ ಕಂಡಿದ್ದು. ಸಕ್ರಿಯ ಔಷಧೀಯ ಪದಾರ್ಥಗಳ (ಎಪಿಐ) ಬೆಲೆ ಏರಿಕೆಯಾಗುತ್ತಿರುವುದರಿಂದ, ತಯಾರಕರಿಗೆ ಬೆಲೆಗಳನ್ನ ಮತ್ತಷ್ಟು ಕಡಿತಗೊಳಿಸಲು ಅವಕಾಶವಿದೆ ಎಂದಿದ್ದಾರೆ.