(ನ್ಯೂಸ್ ಕಡಬ) newskadaba.com ಬೆಂಗಳೂರು, ನ.26. ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕೊಂದು ಸ್ಕಿಡ್ ಆದ ಪರಿಣಾಮ 9 ವರ್ಷದ ಬಾಲಕ ರಸ್ತೆಗೆ ಬಿದ್ದಿದ್ದು, ಬಾಲಕನ ಮೇಲೆ ಬಸ್ ಹರಿದು ಬಾಲಕ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಶನಿವಾರದಂದು ನಡೆದಿದೆ.

ಸ್ಥಳೀಯ ನಿವಾಸಿ ರಾಜಣ್ಣ ಎಂಬವರು ತನ್ನ ಮೊಮ್ಮಕ್ಕಳೊಂದಿಗೆ ತೆರಳುತ್ತಿದ್ದಾಗ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಟ್ರಾಫಿಕ್ ಪೊಲೀಸರನ್ನು ಕಂಡು ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ಹಿಡಿಯುತ್ತಾರೆ ಎಂದು ಹೆದರಿ ಬದಲಿ ರಸ್ತೆಯಲ್ಲಿ ಸಂಚರಿಸಲೆಂದು ಬೈಕನ್ನು ತಿರುಗಿಸಿದಾಗ ಬಾಲಕ ದರ್ಶನ್ ಬೈಕಿನಿಂದ ರಸ್ತೆಗೆ ಬಿದ್ದ ಪರಿಣಾಮ ಬಾಲಕನ ಮೇಲೆ ಕೆಎಸ್ಸಾರ್ಟಿಸಿ ಬಸ್ಸು ಹರಿದಿದೆ. ಇದರಿಂದಾಗಿ ದರ್ಶನ್ ಸ್ಥಳದಲ್ಲೇ ಮೃತಪಟ್ಟನೆನ್ನಲಾಗಿದೆ.













