ಬೆಳಂದೂರು: ಗ್ರಾ.ಪಂ. ಸಿಬ್ಬಂದಿಗಳ ಬೇಡಿಕೆ ಈಡೇರಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸಾರ್ವಜನಿಕರಿಂದ ಮನವಿ

(ನ್ಯೂಸ್ ಕಡಬ) newskadaba.com ಕಾಣಿಯೂರು, ಡಿ. 21. ಬೆಳಂದೂರು ಗ್ರಾ.ಪಂ. ಹಾಗೂ ಗ್ರಾಮ ಆಡಳಿತಾಧಿಕಾರಿ ಕಛೇರಿ ಸಿಬ್ಬಂದಿಗಳು ಅನಿರ್ದಿಷ್ಟಾವದಿ ಹಕ್ಕೊತ್ತಾಯ ಆಂದೋಲನ ಹಮ್ಮಿಕೊಂಡಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಯಾವುದೇ ಸೇವೆಗಳು ಲಭ್ಯವಾಗದೇ ತೊಂದರೆಯಾಗುತ್ತಿದೆ. ಶೀಘ್ರವೇ ಸಿಬ್ಬಂದಿಗಳ ಬೇಡಿಕೆಯನ್ನು ಈಡೇರಿಸಿ, ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿ ಸಾರ್ವಜನಿಕರ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಗ್ರಾ.ಪಂ. ಅಧ್ಯಕ್ಷರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಪಂ. ಸದಸ್ಯ ಜಯಂತ ಅಬೀರ, ಪಂ. ಮಾಜಿ ಅಧ್ಯಕ್ಷ ನಝೀರ್ ದೇವಸ್ಯ, ಪಲ್ಲತ್ತಾರು ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಕಾರ್ಯದರ್ಶಿ ನವಾಝ್ ಸಖಾಫಿ, ಪಲ್ಲತ್ತಾರು ಎಸ್ಡಿಎಂಸಿ ಅಧ್ಯಕ್ಷ ಉಮರ್ ಶಾಫಿ, ಅಬೂಬಕ್ಕರ್ ಫಾಳಿಲಿ, ಶಾಫಿ ಬೆಳಂದೂರು, ಗ್ರಂಥಾಲಯ ಮೇಲ್ವಿಚಾರಕಿ ವಿಮಲಾ, ವಿಕಲಚೇತನ ಪುನರ್ವಸತಿ ಕಾರ್ಯಕರ್ತೆ ಪ್ರಶಾಂತಿ ಮೊದಲಾದವರು ಉಪಸ್ಥಿತರಿದ್ದರು.

Also Read  ಕಲ್ಲುಗುಡ್ಡೆ: ಇಂದು ಬೆಳಿಗ್ಗೆ ಪುನಃ ತೆರೆದ ಮದ್ಯದಂಗಡಿ ► ಗ್ರಾಮಸ್ಥರಿಂದ ತೀವ್ರಗೊಂಡ ಪ್ರತಿಭಟನೆ

 

error: Content is protected !!
Scroll to Top