➤ ಮೈಸೂರು: ಹೆಚ್ಚುತ್ತಿರುವ ರಾಸುಗಳ ಚರ್ಮಗಂಟು ರೋಗ ➤ ಜಾನುವಾರು ಸಂತೆಗೆ ತಾತ್ಕಲಿಕ ತಡೆ

ಮೈಸೂರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರಾಸುಗಳ ಚರ್ಮಗಂಟು ರೋಗ  ಇನ್ನೂಕೂಡ ನಿಯಂತ್ರಣಕ್ಕೆ ಬರುತ್ತಿಲ್ಲ. ಚರ್ಮಗಂಟು ರೋಗಕ್ಕೆ ರೈತರು ಕಂಗಾಲಾಗಿದ್ದಾರೆ. ರೋಗ ನಿಯಂತ್ರಣಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇನ್ನಿಲ್ಲದ ಪ್ರಯತ್ನ ಪಟ್ಟರು ಜಾನುವಾರುಗಳ ಸಾವು ಮುಂದುವರೆದಿದೆ.

ಅಗತ್ಯ ಮುನ್ನೆಚ್ಚರಿಕೆ  ಹಾಗೂ ಲಸಿಕೆ ನೀಡುವ ಕಾರ್ಯ ನಡೆದರು ಜಿಲ್ಲೆಯಲ್ಲಿ ಚರ್ಮಗಂಟು ರೋಗ ಹೆಚ್ಚುತ್ತಲೆ ಇದ್ದು, ಈವರೆಗೆ 158 ರಾಸುಗಳು ಮೃತಪಟ್ಟಿದೆ.

ಜಾನುವಾರು ಸಂತೆಗೆ ತಡೆ:  ಚರ್ಮಗಂಟು ರೋಗ ಹೆಚ್ಚಾಗಿ ಹರಡುತ್ತಿರುವುದರಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ದನಗಳ ಸಂತೆ ಮತ್ತು ಜಾತ್ರೆಯನ್ನು ತಾತ್ಕಲಿಕವಾಗಿ ನಿಷೇಧಿಸಲಾಗಿದೆ.

 

error: Content is protected !!

Join the Group

Join WhatsApp Group