ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಲಬುರಗಿ, ಡಿ. 17. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆಯಾಗಿದ್ದು, ಮೃತ ಯುವತಿಯನ್ನು ಸೃಷ್ಟಿ ಮಾರುತಿ (21) ಎಂದು ಗುರುತಿಸಲಾಗಿದೆ. ಸೃಷ್ಟಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ.

ಕಾಲೇಜಿಗೆ ಹೋಗಿದ್ದ ಯುವತಿ ಸಂಜೆಯಾದ್ರು ಮನೆಗೆ ಬಂದಿರಲಿಲ್ಲ, ಈ ಹಿನ್ನೆಲೆ ಪೋಷಕರು ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಇದೀಗ ಸೃಷ್ಟಿ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಮೃತದೇಹ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ ಎನ್ನಲಾಗಿದೆ.

Also Read  “ಶ್ರೀ ಟೆಕ್ನಾಲಜೀಸ್‌” ಪ್ರಸ್ತುತಪಡಿಸುತ್ತಿದೆ 4ನೇ ವರ್ಷದ ಲಕ್ಕೀ ಸ್ಕೀಮ್; ಕೇವಲ 1 ಸಾವಿರ ಪಾವತಿಸಿ ಸ್ಕೂಟರ್, ಚಿನ್ನ ಮತ್ತು ಫರ್ನಿಚರ್ ನಿಮ್ಮದಾಗಿಸಿ

error: Content is protected !!
Scroll to Top