ಚಲಿಸುತ್ತಿದ್ದ ಲಾರಿಯ ಟ್ರಾಲಿ ಕುಸಿತ- ತಪ್ಪಿದ ಅನಾಹುತ



(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 16. ಚಲಿಸುತ್ತಿದ್ದ ಲಾರಿಯ ಟ್ರಾಲಿ ತುಂಡಾಗಿ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ ಘಟನೆ ಮಂಗಳೂರು –ಮಿಲ್ಲುಪುರಂ ರಸ್ತೆಯ ರಾಷ್ಟ್ರೀಯ 73ರ ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಡ್ತ್ಯಾರು ಎಂಬಲ್ಲಿ ನಡೆದಿದೆ.







ಲಾರಿಯು ಬೆಂಗಳೂರಿನಿಂದ ಮಂಗಳೂರಿಗೆ ನಿಗದಿತ ಭಾರದ ಗ್ಲಾಸ್ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಅಂಬಡ್ತ್ಯಾರು ಸಮೀಪಿಸುತ್ತಿದಂತೆಯೇ ಲಾರಿಯ ಹಿಂಬದಿ ಕಬ್ಬಿಣದ ಟ್ರಾಲಿ ಬಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದ ರಸ್ತೆಯ ಅಂಚಿನಲ್ಲಿದ್ದ ಕ್ಯಾಂಟೀನ್ ಸಮೀಪ ಹೋಗಿ ನಿಂತಿದೆ. ಲಾರಿಯ ಟ್ರಾಲಿ ಸಂಪೂರ್ಣ ಭಾಗಿದೆ. ಸ್ಥಳೀಯರು ಮರದ ಕಂಬಗಳನ್ನು ಆಧಾರವಾಗಿ ಇರಿಸಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top