ಚಂದ್ರು ಸಾವಿನ ಪ್ರಕರಣ ➤ ತನಿಖೆ ಕೈಗೆತ್ತಿಕೊಂಡ ಸಿಐಡಿ

(ನ್ಯೂಸ್‌ ಕಡಬ) newskadaba.com ಬೆಂಗಳೂರು, ಡಿ. 15. ಹೊನ್ನಾಳಿ ಶಾಸಕ ರೇಣುಕಾಚಾರ‍್ಯ ಸೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣ ಸಿಐಡಿಗೆ ಒಪ್ಪಿಸಲಾಗಿದ್ದು, ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ತಂಡ ಶಾಸಕ ರೇಣುಕಾಚಾರ‍್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.


ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳ ತಂಡ ಚಂದ್ರಶೇಖರ್ ಕೊನೆಯ ಬಾರಿ ಯಾರನ್ನು ಭೇಟಿಯಾಗಿದ್ದ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಬುಧವಾರ ರೇಣುಕಾಚರ‍್ಯ ಕುಟುಂಬಸ್ಥರ ವಿಚಾರಣೆ ಮಾಡಿದ ಸಿಐಡಿ ತಂಡ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಯಡಿಯೂರಪ್ಪ, ಶೋಭಾ ಕರಂದ್ಲಾಜೆಯ‌ ವಿರುದ್ಧ ವಾಟ್ಸಪ್ ನಲ್ಲಿ ಅವಹೇಳನ ► ಬಿಜೆಪಿಯ ಮೂವರ ವಿರುದ್ಧ ದೂರು ದಾಖಲು

 

error: Content is protected !!
Scroll to Top