ಬೆಳ್ತಂಗಡಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ದೇಹದ ಗುರುತು ಪತ್ತೆ

(ನ್ಯೂಸ್‌ ಕಡಬ) newskadaba.com ಬೆಳ್ತಂಗಡಿ, ಡಿ. 14  ನಡ ಗ್ರಾ.ಪಂ. ವ್ಯಾಪ್ತಿಯ ಸೊರಕೆ ಸಮೀಪ ರಬ್ಬರ್ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಡಿ.12 ರಂದು ಪತ್ತೆಯಾಗಿತ್ತು, ಆದರೆ ದೇಹದ ಗುರುತು ಪತ್ತೆಯಾಗಿರಲಿಲ್ಲ,  ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ವೈದ್ಯರು ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮೃತದೇಹ ಮಹಿಳೆದ್ದೇ ಎಂದು ತಜ್ಞರು ಖಚಿತ ಪಡಿಸಿದ್ದಾರೆ.

ಸುಮಾರು 30ರಿಂದ 40 ವರ್ಷದ ಮಹಿಳೆಯ ಮೃತದೇಹ ಎಂದು ತಿಳಿದು ಬಂದಿದ್ದು, ಶವ ಸಿಕ್ಕ ಸ್ಥಳದಲ್ಲಿ ಕಾಲು ಉಂಗುರ, ಬಳೆಗಳು ಪತ್ತೆಯಾಗಿವೆ. ಮಹಿಳೆಯ ದೇಹ 99ರಷ್ಟು ಸುಟ್ಟು ಹೋಗಿದ್ದರಿಂದ ಗುರುತು ಸಾದ್ಯವಾಗಿರಲಿಲ್ಲ. ಮೃತರು ಬೇರೆ ಜಿಲ್ಲೆಯವರಾಗಿದ್ದು, ಈ ಸ್ಥಳದಲ್ಲಿ ಕೊಲೆ ಮಾಡಿರುವ ಸಾದ್ಯತೆ ಇದೆ ಎಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group