ಮನೆ ಹಿಂಬಾಗಿಲು ಮುರಿದು 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Theft, crime, Robbery

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 13. ಮನೆಯ ಹಿಂಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಡೈಮಂಡ್ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಉಡುಪಿಯ ಶಿವಳ್ಳಿ ಗ್ರಾಮ ಕುಂಜಿಬೆಟ್ಟು ಬಳಿ ನಡೆದಿದೆ.

 

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ರೂಮ್‌ ನಲ್ಲಿದ್ದ ಅಲ್ಮೇರಾದ ಬಾಗಿಲನ್ನು ಮುರಿದು ತೆಗೆದು, ಗೋದ್ರೇಜ್‌ ಲಾಕರ್‌ ನಲ್ಲಿದ್ದ ಡೈಮಂಡ್‌ ಉಂಗುರ-1, 20 ಗ್ರಾಂ ತೂಕದ ಚಿನ್ನದ ಜುಮುಕಿ-2, 8 ಗ್ರಾಂ ತೂಕದ ಚಿನ್ನದ ಕಾಯಿನ್‌-1, ಬೆಳ್ಳಿಯ ತಟ್ಟೆಗಳು-2, ಚಿನ್ನದ ಲೇಪನ ಇರುವ ಆಭರಣಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 3,48,000 ಆಗಿದೆ ಎಂದು ಉಡುಪಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Also Read  ದನದ ಹಟ್ಟಿಯ ಗೋಡೆ ಕುಸಿದು ಬಿದ್ದು ವ್ಯಕ್ತಿ ದುರ್ಮರಣ

error: Content is protected !!
Scroll to Top