ಸತತ ಮಳೆಯಿಂದಾಗಿ ಧರೆಗುರುಳಿದ ಬೃಹತ್ ಮರ

 (ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.12– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸತತ ಮೂರುದಿನಗಳಿಂದ ಸುರಿಯುತ್ತಿರುವ ಗಾಳಿ ಸಹಿತ ಮಳೆಗೆ ಎರಡು ಬೃಹತ್ ಮರಗಳು ಧರೆಗೆ ಉರುಳಿದ್ದು, ನಗರದ ಯಲಹಂಕದ ಕೆಂಪೇಗೌಡ ವಾರ್ಡಿನಲ್ಲಿ ಒಂದು ಬೃಹತ್ ಮರ ಮಳೆಗೆ ಕೆಳಗೆ ಬಿದ್ದಿದೆ. ಅದೇ ರೀತಿ, ಅನೇಪಾಳ್ಯ ಸಿಗ್ನಲ್ ಬಳಿಯೂ ಮತ್ತೊಂದು ದೊಡ್ಡ ಮರವೊಂದು ನೆಲಕ್ಕೆ ಉರುಳಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವಡೆ ಮರದ ರೆಂಬೆಗಳು ರಸ್ತೆಗೆ ಬಿದ್ದಿರುವ ದೂರುಗಳು ಕೇಳಿಬಂದಿದ್ದು, ಈ ಸಂಬಂಧ ವಾರ್ಡ್‌ವಾರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆಂದು ತಿಳಿದುಬಮದಿದೆ. ಮುಂಜಾನೆಯೂ ಕೆಲವಡೆ ಮಳೆ ಸುರಿಯಿತು ಎನ್ನಲಾಗಿದೆ. ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮರ, ರಂಬೆಕೊಂಬೆಗಳು ಮುರಿದು ಬಿದ್ದಿರುವ ದೃಶ್ಯಗಳು ನಗರದ ಅಲ್ಲಲ್ಲಿ ಕಂಡುಬಂದವು.

 

 

error: Content is protected !!

Join the Group

Join WhatsApp Group