➤ಬಕೇಟ್ ನಲ್ಲಿ ಮುಳುಗಿ ಮಗು ಮೃತ್ಯು

 (ನ್ಯೂಸ್ ಕಡಬ) newskadaba.com  ಜಗಳೂರು, ಡಿ.12  ಬಚ್ಚಲು ಮನೆಯಲ್ಲಿ ತುಂಬಿದ್ದ ಬಕೇಟ್ ನಲ್ಲಿ ಮುಳುಗಿ ಮಗು ಮೃತಪಟ್ಟಿರುವ ಘಟನೆ ಬಿಸ್ತುವಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಮೃತ ಮಗುವನ್ನು ಮಂಜುನಾಥರವರ ದ್ವಿತೀಯ ಪುತ್ರಿ ಅನುಸಾವ್ಯ (1) ಎಂದು ತಿಳಿದುಬಂದಿದೆ. ಕೂಲಿ ಕೆಲಸಕ್ಕೆ ಹೋಗಿದ್ದ ಮೃತ ಮಗುವಿನ ತಂದೆ  ಮಂಜುನಾಥ್ ಸಂಜೆ ವಾಪಾಸ್ ಬಂದು ಸ್ನಾನದ ಮನೆಗೆ ಹೋಗಿ ಸ್ನಾನ ಮುಗಿಸಿ ಬಾಗಿಲು ಹಾಕದೇ ಬಂದಿದ್ದಾರೆ. ಆಟವಾಡುತ್ತಾ ಸ್ನಾನದ ಕೊಠಡಿಗೆ ಹೋದ ಮಗು ನೀರು ತುಂಬಿದ ಬಕೆಟ್‍ನಲ್ಲಿ ಬಿದ್ದಿದೆ.ಇತ್ತ ಮಗು ಕಾಣದೇ ಇದ್ದಾಗ ಅಕ್ಕ ಪಕ್ಕದವರ ಮನೆಯವರನ್ನೂ ವಿಚಾರಿಸಿದಾಗ ಮಗು ಪತ್ತೆಯಾಗಿಲ್ಲ. ಮನೆಯಲ್ಲಿ ಹುಡುಕಿದರೂ ಮಗುವಿನ ಸದ್ದು ಕೇಳದಿದ್ದಾಗ ಬಚ್ಚಲು ಮನೆಯಲ್ಲಿ ಪೋಷಕರು ಪರೀಕ್ಷಿಸಿದ್ದಾರೆ. ಮಗು ಬಕೆಟ್‍ನಲ್ಲಿ ಬಿದ್ದು ನೀರು ಕುಡಿದು ಒದ್ದಾಡುತ್ತಿದ್ದಿದ್ದನ್ನು ಗಮನಿಸಿ ತಕ್ಷಣವೇ ಜಗಳೂರು ಆಸ್ಪತ್ರೆಗೆ ಸೇರಿಸಲು ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಮಗು ಮೃತಪಟ್ಟಿದೆ. ಈ ಘಟನೆ ಸಂಬಂಧ ಮೃತ ಮಗುವಿನ ತಂದೆ ಮಂಜುನಾಥ್ ಜಗಳೂರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Also Read  MCMC ಮೂಲಕ ಜಾಹೀರಾತುಗಳ ಮೇಲೆ ದಿನದ 24 ನಿಗಾ

 

 

 

 

error: Content is protected !!
Scroll to Top