(ನ್ಯೂಸ್ ಕಡಬ) newskadaba.com ಕಡಬ, ಡಿ.12. ನರ್ಸರಿಯೊಂದರಿಂದ 25 ಸಾವಿರ ರೂ. ಮಿಕ್ಕಿದ ಬೆಲೆಬಾಳುವ ಗಿಡಗಳನ್ನು ಕದ್ದೊಯ್ದಿರುವ ಘಟನೆ ಭಾನುವಾರ ತಡರಾತ್ರಿ ಕಡಬದಿಂದ ವರದಿಯಾಗಿದೆ.
ಇಲ್ಲಿನ ಮುಖ್ಯ ಪೇಟೆಯ ಅನುಗ್ರಹ ಸಭಾ ಭವನದ ಮುಂಭಾಗದ ಪ್ಲ್ಯಾಂಟ್ ಝೋನ್ ನರ್ಸರಿಯಿಂದ ರಂಬುಟಾನ್ ಸೇರಿದಂತೆ ಬೆಲೆಬಾಳುವ ಗಿಡಗಳನ್ನು ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ನರ್ಸರಿ ಮಾಲಕರು ಕಡಬ ಠಾಣೆಗೆ ದೂರು ನೀಡಿದ್ದಾರೆ.