ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ

(ನ್ಯೂಸ್ ಕಡಬ) newskadaba.com ಕುಂತೂರು, ಡಿ. 10. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನವನ್ನು ಮಾನವ ಹಕ್ಕುಗಳ ಸಂಘದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.

 

ಕಾರ್ಯಕ್ರಮದ ಅಧಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಉಷಾ ಎಂ.ಎಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾನವ ಹಕ್ಕುಗಳ ಮಹತ್ವ ಮತ್ತು ಪ್ರಸ್ತುತತೆಯನ್ನು ಪ್ರಶಿಕ್ಷಣಾರ್ಥಿಗಳಿಗೆ ವಿವರಿಸಿದರು. ಪ್ರಶಿಕ್ಷಣಾರ್ಥಿ ತಷ್ಪಿಯತ್ ಮಾನವ ಹಕ್ಕುಗಳ ದಿನದ ಕುರಿತು ಸವಿವರವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ಸಮೂಹ ಗೀತೆಯನ್ನು ಹಾಡಿದರು. ಮಾನವ ಹಕ್ಕುಗಳ ಸಂಘದ ಸಂಯೋಜಕರಾದ ಉಪನ್ಯಾಸಕಿ ಶ್ರೀಮತಿ ಉಮಾಶ್ರೀ ಪಿ. ಬಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಮಾನವ ಹಕ್ಕುಗಳ ಸಂಘದ ಕಾರ್ಯದರ್ಶಿ ಕು| ಪ್ರಿಯಾ ಕೆ ವಂದನಾರ್ಪಣೆಗೈದರು. ಕು| ಅಲ್ಫೋಸ್ನಾ ಟಿ. ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಶಿಕ್ಷಕ ವರ್ಗದವರು ಉಪಸ್ಧಿತರಿದ್ದರು

error: Content is protected !!

Join the Group

Join WhatsApp Group