ತೂಕದ ಸಮಸ್ಯೆಯೇ..? ➤ ಹಾಗಿದ್ದಲ್ಲಿ ಸಿಹಿಗೆಣಸನ್ನು ಈ ರೀತಿಯಾಗಿ ಸೇವಿಸಿ

(ನ್ಯೂಸ್ ಕಡಬ) newskadaba.com ಡಿ. 09. ಕೆಲವರಿಗೆ ತುಂಬಾ ಪ್ರಿಯವಾಗಿರುವ ಸಿಹಿ ಗೆಣಸು ಚಳಿಗಾಲದಲ್ಲಿ ಯಥೇಚ್ಛವಾಗಿ ಲಭ್ಯವಾಗಲಿದೆ. ಸಿಹಿಗೆಣಸು ತಿನ್ನಲು ರುಚಿಕರ ಮಾತ್ರವಲ್ಲ, ಅದು ಆರೋಗ್ಯದ ಗಣಿಯೂ ಹೌದು. ನಮ್ಮಲ್ಲಿ, ಕೆಲವರು ಸಿಹಿ ಗೆಣಸಿನ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ, ತೂಕ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಸಿಹಿ ಗೆಣಸಿನ ಸೇವನೆಯಿಂದ ಆರೋಗ್ಯಕರವಾಗಿ, ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ನೈಸರ್ಗಿಕ ಸಿಹಿ ಪದಾರ್ಥವಾಗಿರುವ ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಖನಿಜಾಂಶಗಳಂತಹ ಅಂಶಗಳು ಕಂಡು ಬರುತ್ತವೆ. ಇದು ತೂಕ ಇಳಿಕೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅಷ್ಟೇ ಅಲ್ಲ, ಸಿಹಿ ಗೆಣಸಿನ ಸೇವನೆಯಿಂದ ಸಿಹಿ ತಿನಿಸುಗಳನ್ನು ತಿನ್ನುವ ಹಂಬಲ ಕೂಡಾ ಕಡಿಮೆಯಾಗುತ್ತದೆ. ಆದರೆ, ಸಿಹಿ ಗೆಣಸನ್ನು ಸರಿಯಾದ ರೀತಿಯಲ್ಲಿ ಸೇವಿಸಿದರಷ್ಟೇ ಇದು ತೂಕ ಇಳಿಕೆಗೆ ಸಹಾಯಕವಾಗಲಿದೆ. ಹಾಗಿದ್ದರೆ, ತೂಕ ಇಳಿಕೆಗಾಗಿ ಸಿಹಿ ಗೆಣಸನ್ನು ಹೇಗೆ ಸೇವಿಸಬೇಕು ಎಂದು ನೋಡೋಣ…

Also Read  ಗಣಿತ ಶಾಸ್ತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡುವ ವಿಶಿಷ್ಟ ಪದಕ - ಫೀಲ್ಡ್ಸ್ ಮೆಡಲ್ ಡಾ|| ಮುರಲೀ ಮೋಹನ್ ಚೂಂತಾರು

ತೂಕ ಇಳಿಕೆಗಾಗಿ ಸಿಹಿ ಗೆಣಸನ್ನು ತಿನ್ನುವ ಸರಿಯಾದ ಮಾರ್ಗ:
ನೀವು ತೂಕ ಇಳಿಕೆಗಾಗಿ ಸಿಹಿ ಗೆಣಸನ್ನು ತಿನ್ನಲು ಬಯಸಿದರೆ ಮೊದಲಿಗೆ ಇದನ್ನು ಬೇಯಿಸಿ, ಸಿಪ್ಪೆ ತೆಗೆದು ಹಾಗೆಯೇ ಸೇವಿಸಿ. ಇದರೊಂದಿಗೆ ಇತರ ಸಿಹಿಕಾರಕಗಳನ್ನು ಅಂದರೆ ಸಕ್ಕರೆ, ಬೆಲ್ಲ, ಜೇನು ತುಪ್ಪವನ್ನು ಬೆರೆಸಿ ಸೇವಿಸಬೇಡಿ.

ಸಿಹಿ ಗೆಣಸು ನಿರ್ಜಲೀಕರಣ ಸಮಸ್ಯೆ ನಿವಾರಿಸುತ್ತದೆ:
ಸಿಹಿ ಗೆಣಸು ಹೆಚ್ಚು ನೀರಿನ ಅಂಶವನ್ನು ಹೊಂದಿದ್ದು, ಹಾಗಾಗಿ ಸಿಹಿ ಗೆಣಸಿನ ಸೇವನೆಯಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಇರುವುದಿಲ್ಲ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.

Also Read  ಬಿಳಿಮುಟ್ಟಿನ ಸಮಸ್ಯೆಯೇ.. -ಇಲ್ಲಿದೆ ಪರಿಹಾರ

ಫೈಬರ್ ಹೇರಳವಾಗಿದೆ:
ಸಿಹಿ ಗೆಣಸು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವಷ್ಟು ಫೈಬರ್ ಅನ್ನು ಹೊಂದಿರುತ್ತದೆ. ಫೈಬರ್ ಯುಕ್ತ ಆಹಾರದ ಸೇವನೆಯಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದು ಹಸಿವನ್ನು ಕಡಿಮೆ ಮಾಡಿ, ಕಡಿಮೆ ಆಹಾರ ಸೇವಿಸಲು ಸಹಕಾರಿಯಾಗಿದೆ.

error: Content is protected !!
Scroll to Top