(ನ್ಯೂಸ್ ಕಡಬ) newskadaba.com ವಿಟ್ಲ, ನ.22. ಪ್ರಯಾಣಿಕರನ್ನು ಕುಳ್ಳಿರಿಸಿ ಚಾಲಕ ಕೆಳಗಿಳಿದಾಗ ಹಠಾತ್ ಚಲಿಸಿದ ಟಾಟಾ ಮ್ಯಾಜಿಕ್ ಐರಿಸ್ ವಾಹನವೊಂದು ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಕಲ್ಲಡ್ಕ ಸಮೀಪದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ.
ಟಾಟಾ ಮ್ಯಾಜಿಕ್ ಐರಿಸ್ ವಾಹನದಲ್ಲಿದ್ದ ಪ್ರಯಾಣಿಕ ಮಹಿಳೆಯೋರ್ವರು ಪಡಿಬಾಗಿಲು ಜಂಕ್ಷನ್ ನಲ್ಲಿ ಅಂಗಡಿಯಿಂದ ಸಾಮಾನು ಖರೀದಿಸಲೆಂದು ತೆರಳಿದ್ದು, ಆ ಸಂದರ್ಭದಲ್ಲಿ ಚಾಲಕನೂ ವಾಹನದಿಂದ ಇಳಿದು ಹೋಗಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ಇದ್ದಕ್ಕಿಂದಂತೆ ಚಲಿಸಿದ ಟಾಟಾ ಮ್ಯಾಜಿಕ್ ಸುಮಾರು ೨೦ ಅಡಿ ಆಳದ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ಪ್ರಣಮ್ಯ, ಈಶ್ವರ ಮೂಲ್ಯ, ರತ್ನ ಸೇರಿದಂತೆ ನಾಲ್ವರು ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.