ಮತದಾರ ಪಟ್ಟಿಯಿಂದ ಅರ್ಹ ಮತದಾರರನ್ನು ತೆಗೆದು ಅನ್ಯಾಯ ಮಾಡಲಾಗುತ್ತಿದೆ ➤ ಮಾಜಿ ಸಚಿವ ರಮಾನಾಥ ರೈ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 09. ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗದುಹಾಕಿ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

 

ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾರಾಮು ಅವರನ್ನು ಬೇಟಿಯಾಗಿ ಸಹಾಯಕ ಆಯಕ್ತರಿಗೆ ಮನವಿ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅರ್ಹ ಮತದಾರರನ್ನು ಪಟ್ಟಿಯಿಂದ ಕಳಚಬಾರದು. ಚುನಾವಣಾ ಆಯೋಗದ ಮೂಲಕ ಸೇರ್ಪಡೆ ಮತ್ತು ಕಳಚುವ ಬಗ್ಗೆ ಮಾರ್ಗದರ್ಶಿ ಸೂತ್ರದಂತೆ ಸ್ಥಳೀಯ ಮಟ್ಟದ ಮತಗಟ್ಟೆಯ ಬಿ.ಎಲ್.ಒ ಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ವಿಶ್ವಾಸ ವಿದೆ. ಆದರೆ ಕೆಲ ನಾಯಕರುಗಳು ತಮಗೆ ಬೇಕಾದ ರೀತಿಯಲ್ಲಿ ಹೆಸರುಗಳನ್ನು ಕಳಚುವಂತೆ ಬಿ.ಎಲ್.ಒ.ಗಳಿಗೆ ಒತ್ತಡ ಹೇರುವ ವಿಚಾರ ಗಮನಕ್ಕೆ ಬಂದಿರುವುದರಿಂದ ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸಲು ಬಿ.ಎಲ್‌.ಒ.ಗಳಿಗೆ ಸೂಚನೆ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸುದೀಪ್ ಶೆಟ್ಟಿ ಮಾಣಿ, ಪಿಯೂಸ್ ಎಲ್ ರೋಡ್ರಿಗಸ್, ಪದ್ಮನಾಭ ರೈ, ಅಬ್ಬಾಸ್ ಆಲಿ ಹಾಗೂ ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top