(ನ್ಯೂಸ್ ಕಡಬ) newskadaba.com ಮಾಣಿ, ಡಿ. 07. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಇದರ ವತಿಯಿಂದ ರಿಫಾಈ ಶೈಖ್ (ರ)ರವರ ಸ್ಮರಣಾರ್ಥ ‘ಶುದ್ಧ ಪರಿಸರ ಮಾಸಾಚರಣೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಚತಾ ಕಾರ್ಯಕ್ರಮವನ್ನು ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯ ವಠಾರದಲ್ಲಿ ನಡೆಸಲಾಯಿತು.
ಬಹು/ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಮಂಜನಾಡಿ ದುಆ ಮಾಡಿದರು. ಕೆಸಿಎಫ್ ರಿಯಾದ್ ಝೋನ್ ಪ್ರೆಸಿಡೆಂಟ್ ಬಹು ಮುಸ್ತಫಾ ಸಅದಿ ಸೂರಿಕುಮೇರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಚ್ಚತೆಯು ಈಮಾನಿನ ಭಾಗವಾಗಿದೆ ಮತ್ತು ಸಾಂತ್ವನ ಸಮಾಜಸೇವೆಗೆ ರಿಫಾಈ ಶೈಖ್ (ರ)ರವರು ನಮಗೆ ದೊಡ್ಡ ಮಾದರಿಯಾಗಿದ್ದಾರೆ ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸೆಂಟರ್ ಸಾಂತ್ವನ ಕಾರ್ಯದರ್ಶಿ ಎಸ್.ಆರ್. ಸುಲೈಮಾನ್ ಸೂರಿಕುಮೇರು ಪಾಲ್ಗೊಂಡರು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಬ್ದುಲ್ ಕರೀಂ ಸೂರಿಕುಮೇರು, ಕಾರ್ಯದರ್ಶಿ ಸಲೀಂ ಮಾಣಿ, ಕೋಶಾಧಿಕಾರಿ ಇಬ್ರಾಹಿಂ ಮಾಣಿ, ಅಶ್ರಫ್ ಪಾರ್ಪಕಜೆ, ಅಬ್ದುಲ್ ಖಾದರ್ ಬರಿಮಾರು, ಅಬ್ಬಾಸ್ ಗಡಿಯಾರ, ಸೆಂಟರ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಪೇರಮೊಗರು, ಹಫೀಝ್ ನೆಲ್ಲಿ, ಅಝೀಂ ನೆಲ್ಲಿ, ರಫೀಕ್ ನೆಲ್ಲಿ, ಹಸೈನ್ ಸಂಕ, ಅಶ್ರಫ್ ಸಖಾಫಿ, ಹಂಝ ಸೂರಿಕುಮೇರು, ಹನೀಫ್ ಸಂಕ, ಮಸೀದಿ ಕಾರ್ಯದರ್ಶಿ ಅಮೀರುದ್ದೀನ್ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು, ಉಮ್ಮರ್ ಸೂರಿಕುಮೇರು, ಇಮ್ರಾನ್ ಸೂರಿಕುಮೇರು, ಮುನೀರ್ ಮಾಣಿ ಸಹಿತ ಹಲವರು ಉಪಸ್ಥಿತರಿದ್ದರು. ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯ ಪರಿಸರ ಖಬರ್‌ಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.