ದಾವಣಗೆರೆ: ವೋಟರ್ ಐಡಿಯಲ್ಲಿ ಭಾರಿ ಅಕ್ರಮ ನಡೆದಿರುವುದು ಕಾನುನಿಗೆ ವಿರುದ್ದವಾಗಿದೆ.ನಮ್ಮ ಪ್ರಜಾಪ್ರಭುತ್ವ ಎತ್ತಸಾಗುತ್ತಿದೆ ಎಂದು ನಿವೃತ್ತ ನ್ಯಾ.ಸಂತೋಷ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಡಿ.1 ರಂದು ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಐಡಿ ಅಕ್ರಮ ನಮ್ಮ ನೆಲದ ಕಾನೂನಿಗೆ ವಿರುದ್ದವಾಗಿದೆ. ಇದನ್ನ ಸರಿ ಅಂತ ಒಪ್ಪಿಕೊಳ್ಳುವ ಹಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.