ಬಂಟ್ವಾಳ: ಅಪ್ರಾಪ್ತೆಗೆ ಸ್ಕೂಟರ್ ನೀಡಿದ ಹಿನ್ನೆಲೆ ➤‌ ಪೋಷಕರಿಗೆ 26 ಸಾವಿರ ರೂ. ದಂಡ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 29. ಸಿದ್ದಕಟ್ಟೆಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಅಪ್ತಾಪ್ತೆಗೆ ಸ್ಕೂಟರ್ ಚಲಾಯಿಸಲು ನೀಡಿದ ಆಕೆಯ ತಾಯಿಗೆ ಬಂಟ್ವಾಳ ನ್ಯಾಯಾಲಯವು 26 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.


ಕಳೆದ ಆಗಸ್ಟ್ ನಲ್ಲಿ ಸಿದ್ದಕಟ್ಟೆ ಎಂಬಲ್ಲಿ ಸ್ಕೂಟರ್ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿದ್ದು, ಈ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಹಿನ್ನೆಲೆ ತನಿಖೆ ನಡೆಸಿದ ಎಎಸ್ಐ ವಿಜಯ್ ಅವರು ನೋಟೀಸ್ ಜಾರಿ ಮಾಡಿದ್ದರು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯವು ಅಪಘಾತದ ಸಂದರ್ಭ ಸ್ಕೂಟರ್ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕಿಯ ತಾಯಿಗೆ ದಂಡ ವಿಧಿಸಿ ಆದೇಶಿಸಿದೆ.

Also Read  ವಿಟ್ಲ: ಚಿನ್ನದ ವ್ಯಾಪಾರಿಯ ಮನೆ ಬೆಂಕಿಗಾಹುತಿ ► 15 ಲಕ್ಷ ರೂ. ಅಂದಾಜು ನಷ್ಟ

error: Content is protected !!
Scroll to Top