ವಿಎಲ್​ಸಿ ಮೀಡಿಯಾ ಪ್ಲೇಯರ್ ನಿಷೇಧ ವಾಪಸ್‌ ಪಡೆದ ಸರ್ಕಾರ

(ನ್ಯೂಸ್ ಕಡಬ) newskadaba.com ನ.15: VideoLAN ಯೋಜನೆಯಿಂದ ಅಭಿವೃದ್ಧಿಪಡಿಸಲಾದ ವಿಶ್ವದ ಅತ್ಯಂತ ಜನಪ್ರಿಯ ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್ ಮತ್ತು ಸ್ಟ್ರೀಮಿಂಗ್ ಮೀಡಿಯಾ ಸರ್ವರ್ ವಿಎಲ್​ಸಿ ಪ್ಲೇಯರ್ (VLC Media Player) ನಿಷೇಧವನ್ನು ಭಾರತದ ಸರ್ಕಾರ ತೆಗದುಹಾಕಿದೆ. ಒಂಬತ್ತು ತಿಂಗಳ ಹಿಂದೆ ಕೆಲವು ಕಾರಣಾಂತರಗಳಿಂದ ಭಾರತ ಸರ್ಕಾರ ಈ ಆ್ಯಪ್‌ಗೆ ನಿರ್ಬಂಧ ವಿಧಿಸಿತ್ತು. ಆದರೀಗ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಈ ಮೂಲಕ ಭಾರತದಲ್ಲಿನ ಜನರು ಇನ್ಮುಂದೆ ವಿವಿಧ ಫೀಚರ್ಸ್‌ ಇರುವ ವಿಎಲ್‌ಸಿ ಆ್ಯಪ್‌ ಅನ್ನು ಇನ್​ಸ್ಟಾಲ್ ಉಪಯೋಗಿಸಬಹುದು.

ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ವಿಎಲ್​ಸಿ ಮೀಡಿಯಾ ಪ್ಲೇಯರ್ ನಿರ್ಬಂಧಿಸಲಾಗಿತ್ತು. ನಿಷೇಧದ ಬಗ್ಗೆ ಕಂಪನಿ ಅಥವಾ ಭಾರತ ಸರ್ಕಾರ ಇದುವರೆಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ www.videolan.org ವೆಬ್ ಸೈಟ್ ಅನ್ನು ಭಾರತ ಸರ್ಕಾರ ನಿರ್ಬಂಧಿಸಿರುವುದಾಗಿ ವಿವರಿಸಿತ್ತಷ್ಟೆ.

Also Read  ಕಡಬದ ಎಲೈಟ್ ಮೊಬೈಲ್ಸ್ ನಲ್ಲಿ ದೀಪಾವಳಿ ವಿಶೇಷ ಆಫರ್, ಪ್ರತೀ ಖರೀದಿಗೆ ಲಕ್ಕೀ ಕೂಪನ್ ➤‌ ಆನ್‌ಲೈನ್ ಗಿಂತಲೂ ಕಡಿಮೆ ದರದಲ್ಲಿ ಮಾರಾಟ, ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶ


ಬಳಿಕ ಕಳೆದ ಅಕ್ಟೋಬರ್‌ನಲ್ಲಿ ವಿಎಲ್‌ಸಿ ಮಾಲೀಕರು ಭಾರತ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದರು. ಅದರಂತೆ ಭಾರತದಲ್ಲಿ ನಮ್ಮ ಸೇವೆಯನ್ನು ಏಕೆ ನಿಷೇಧಿಸಲಾಗಿದೆ?, ಈ ಬಗ್ಗೆ ವರ್ಚುವಲ್ ವಿಚಾರಣೆಯ ಮೂಲಕ ತನ್ನ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಸದ್ಯ ಈ ಮನವಿಗೆ ಸ್ಪಂದಿಸಿರುವ ಭಾರತ ಸುಮಾರು 73 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಿಎಲ್‌ಸಿ ಪ್ಲೇಯರ್ ಮೇಲಿನ ನಿಷೇಧವನ್ನು ತೆಗೆದು ಹಾಕಿದೆ.

error: Content is protected !!
Scroll to Top