ಭಾರತದಲ್ಲಿ ಮೊಟ್ಟ ಮೊದಲ 5G ಫೋನ್ ರಿಲೀಸ್ ಮಾಡಿದ ನೋಕಿಯಾ

(ನ್ಯೂಸ್ ಕಡಬ) newskadaba.com ನ.01: ಹೊಸ ಅವತಾರದೊಂದಿಗೆ ನೋಕಿಯಾ ಭಾರತದಲ್ಲಿ ಮತ್ತೆ ಧೂಳೆಬ್ಬಿಸುತ್ತಿದೆ. ನೋಕಿಯಾ ಕಂಪನಿ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್‌ ಬಿಡುಗಡೆ ಮಾಡಿದೆ. ಮಧ್ಯಮ ಬೆಲೆ ಹೊಂದಿರುವ ಈ ಫೋನಿನ ಹೆಸರು ನೋಕಿಯಾ ಜಿ60 5ಜಿ (Nokia G60 5G).


ನೋಕಿಯಾ G60 5G ಸ್ಮಾರ್ಟ್‌ಫೋನ್‌ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಭಾರತದಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಿ ಅನಾವರಣಗೊಂಡಿರುವ ಈ ಫೋನಿನ 6GB RAM, 128GB ಸ್ಟೋರೇಜ್ ಆಯ್ಕೆಗೆ 29,999 ರೂ. ನಿಗದಿ ಮಾಡಲಾಗಿದೆ. ನವೆಂಬರ್ 1 ರಿಂದ 7 ರ ವರೆಗೆ ನೋಕಿಯಾ ಭಾರತದ ಅಧಿಕೃತ ವೆಬ್​​ಸೈಟ್ ಮತ್ತು ಆಯ್ದ ರಿಟೇಲ್ ಸ್ಟೋರ್​ಗಳನ್ನು ಪ್ರಿ ಬುಕ್ಕಿಂಗ್​ಗೆ ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆಗೆ ಬಂಪರ್ ಆಫರ್ ಅನ್ನು ಘೋಷಣೆ ಮಾಡಿದ್ದು 3,599 ರೂ. ವಿನ ನೋಕಿಯಾ ಈಯರ್ ಬರ್ಡ್ಸ್ ಅನ್ನು ಉಚಿತವಾಗಿ ನಿಮ್ಮದಾಗಿಸಬಹುದು.

Also Read  ಅಂದುಕೊಂಡ ಕೆಲಸ ಕಾರ್ಯಗಳು ಸಿದ್ಧಿ ಆಗಬೇಕೆಂದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

ಈ ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ, ನೋಕಿಯಾ G60 5G 1080*2400 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಹೊಂದಿದೆ. ಇದು 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಈ ಡಿಸ್ ಪ್ಲೇ ಕೂಡ ವಿಭಿನ್ನವಾಗಿದ್ದು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಪಡೆದುಕೊಂಡಿದೆ. ನೋಕಿಯಾ G60 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ.

error: Content is protected !!
Scroll to Top