ಯೂಟ್ಯೂಬ್‌ನಲ್ಲಿ ಶಾರ್ಟ್‌ & ಲಾಂಗ್‌ ವಿಡಿಯೋಗೆ ವಿಶೇಷ ಟ್ಯಾಬ್ಸ್‌!

(ನ್ಯೂಸ್ ಕಡಬ) newskadaba.com ಅ.28: ಯೂಟ್ಯೂಬ್ ತನ್ನ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಲು ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಕೆಲವು ನವೀಕರಣಗಳನ್ನು ಮಾಡುತ್ತಾ ಬರುತ್ತಿದೆ. ವಿಡಿಯೋಗಳನ್ನು ಟ್ರಿಮ್ ಮಾಡಬಹುದಾದ ಹಾಗೂ ಮತ್ತು ಬ್ಲರ್ ಮಾಡಬಹುದಾದ ಆಯ್ಕೆಯನ್ನೂ ನೀಡಿದ್ದು, ಈಗ ಇದರ ಸಾಲಿಗೆ ಹೊಸ ಶಾರ್ಟ್‌ & ಲಾಂಗ್‌ ವಿಡಿಯೋ ಫೀಚರ್ಸ್‌ ಸೇರ್ಪಡೆಗೊಂಡಿದೆ. ಇತ್ತೀಚಿನ ಅಪ್‌ಡೇಟ್‌ನಲ್ಲಿ ಚಾನಲ್‌ ಪೇಜ್‌ನಲ್ಲಿ ಬಳಕೆದಾರರ ಅನುಕೂಲಕ್ಕೆ ಶಾರ್ಟ್‌ ಹಾಗೂ ಲಾಂಗ್‌ ವಿಡಿಯೋಗಾಗಿ ಹೊಸ ಟ್ಯಾಬ್ಸ್‌ ಆಯ್ಕೆ ನೀಡಿದೆ. ಈ ಮೂಲಕ ವೀಕ್ಷಕರು ತಾವು ಏನನ್ನು ವೀಕ್ಷಿಸಬೇಕು ಎಂಬುದನ್ನು ಸುಲಭವಾಗಿ ಆಯ್ಕೆ ಮಾಡಬಹುದಾಗಿದೆ. ಇಷ್ಟವಾಗುವ ಕಂಟೆಂಟ್‌ ಹುಡುಕಲು ವ್ಯಯಿಸುವ ಸಮಯವನ್ನು ಉಳಿಸಬಹುದಾಗಿದೆ.

ಚಾನಲ್ ಪುಟದಲ್ಲಿ ಶಾರ್ಟ್‌ ಹಾಗೂ ಲಾಂಗ್ ವಿಡಿಯೋಗಳಿಗೆ ಚಾನಲ್‌ನಲ್ಲಿ ಪ್ರತ್ಯೇಕ ಟ್ಯಾಬ್ಸ್‌ ಡಿಸ್‌ಪ್ಲೇ ಆಗುತ್ತವೆ. ಯಾಕೆಂದರೆ ವಿವಿಧ ಯೂಟ್ಯೂಬರ್‌ಗಳಿಂದ ವಿಡಿಯೋಗಳನ್ನು ಎಕ್ಸ್‌ಪ್ಲೋರ್ ಮಾಡುವಾಗ ವೀಕ್ಷಕರು ತಾವು ಬಯಸುವ ಕಂಟೆಂಟ್ ಪ್ರಕಾರದ ವಿಡಿಯೋವನ್ನು ನೋಡಲು ಇದು ಸಹಾಯಕವಾಗಲಿದೆ. ಈ ಮೊದಲು ಎಲ್ಲಾ ರೀತಿಯ ವಿಡಿಯೋಗಳು ಒಂದೇ ವಿಡಿಯೋ ವಿಭಾಗದಲ್ಲಿ ಡಿಸ್‌ಪ್ಲೇ ಆಗುತ್ತಿದ್ದವು. ಪರಿಣಾಮ ಯಾವ ವಿಡಿಯೋ ನೋಡಬೇಕು, ಯಾವ ವಿಡಿಯೋ ಕ್ವಿಟ್‌ ಮಾಡಬೇಕು ಎಂಬ ಗೊಂದಲ ನಿಮಗೂ ಸಹ ಕಾಡಿರಬಹುದು. ಈ ಕಾರಣಕ್ಕೆ ಯೂಟ್ಯೂಬ್‌ ಈ ಫೀಚರ್ಸ್‌ ಪರಿಚಯಿಸಿದೆ. ಈ ಬದಲಾವಣೆಯ ಭಾಗವಾಗಿ ಇನ್ಮುಂದೆ ಸಾಮಾನ್ಯ ವಿಡಿಯೋಗಳ ವಿಭಾಗದ ಅಡಿಯಲ್ಲಿ ಶಾರ್ಟ್‌ ಹಾಗೂ ಲಾಂಗ್ ವಿಡಿಯೋಗಳು ಡಿಸ್‌ಪ್ಲೇ ಆಗುವುದಿಲ್ಲ.

Also Read  'ಜಯತು ಜನ್ಮಭೂಮಿ' ದೇಶಭಕ್ತಿ ಗೀತೆ ಬಿಡುಗಡೆ

error: Content is protected !!
Scroll to Top