ಬಜೆಟ್ ಪ್ರಿಯರು ಫಿದಾ ಆಗಿರುವ 6,999 ರೂಪಾಯಿ Redmi A1+ ಈಗ ಖರೀದಿಗೆ ಲಭ್ಯ

(ನ್ಯೂಸ್‌ ಕಡಬ) newskadaba.com ಅ.19: ಶವೋಮಿ ಕಂಪನಿ ಕಳೆದ ಸೆಪ್ಟೆಂಬರ್​ನಲ್ಲಿ Redmi A1 ಎಂಬ ಹೊಸ ಫೋನನ್ನು ಭಾರತದಲ್ಲಿ ಅನಾವರಣ ಮಾಡಿತ್ತು. ಬಜೆಟ್ ಬೆಲೆಯ ಈ ಫೋನಿಗೆ ಈಗಕೂಡ ಬೇಡಿಕೆ ಇದೆ. ಹೀಗಿರುವಾಗ ಕಳೆದ ವಾರ ಈ ಸರಣಿಯ ಮುಂದುವರೆದ ಭಾಗವಾಗಿ ರೆಡ್ಮಿ ಎ1+ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿತ್ತು. ಬಜೆಟ್ ಬೆಲೆಯ ಈ ಬಂಪರ್ ಫೋನ್ ಈಗ ಖರೀದಿಗೆ ಸಿಗುತ್ತಿದೆ.

ರೆಡ್ಮಿ A1+ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 2GB RAM + 32GB ಸ್ಟೋರೇಜ್​ಗೆ ಕೇವಲ 6,999 ರೂ. ಮತ್ತು 3GB RAM + 32GB ಸ್ಟೋರೇಜ್​ ಆಯ್ಕೆಗೆ 7,999 ರೂ. ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮತ್ತು ಎಂಐ ಅಧಿಕೃತ ವೆಬ್​ಸೈಟ್​ನಲ್ಲಿ ಸೇಲ್ ಕಾಣುತ್ತಿದೆ.
ಈ ಸ್ಮಾರ್ಟ್‌ಫೋನ್ 1600*720 ಪಿಕ್ಸೆಲ್ ರೆಸಲೂಶನ್ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ ಪ್ಲಸ್‌ ಡಾಟ್ ಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಡಾರ್ಕ್ ಮೋಡ್ ಮತ್ತು ನೈಟ್ ಮೋಡ್ ಆಯ್ಕೆ ನೀಡಲಾಗಿದೆ. ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸರ್ ಅಳವಡಿಸಲಾಗಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್​ನಲ್ಲಿ 8 ಮೆಗಾಫಿಕ್ಸೆಲ್​ನ ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್‌ ಇದೆ.

Also Read  ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರ ಮನೆಯಲ್ಲಿ ನಿಮ್ಮ ಪ್ರೀತಿ ಒಪ್ಪದಿದ್ದರೆ ಹೀಗೆ ಮಾಡಿ. ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ಸಾಮಾನ್ಯ ವೇಗದ ಚಾರ್ಜರ್​ನೊಂದಿಗೆ ಬರುತ್ತದೆ. 30 ದಿನಗಳ ಸ್ಟ್ಯಾಂಡ್​ ಬೈ ಟೈಮ್ ಎಂದು ಕಂಪನಿ ಹೇಳಿಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ವಿಶೇಷವಾಗಿ ಹಿಂಭಾಗದಲ್ಲಿ ಫಿಂಗರ್​ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.

error: Content is protected !!
Scroll to Top