(ನ್ಯೂಸ್ ಕಡಬ) newskadaba.com ನವದೆಹಲಿ, ಅ.18. ವಿಶ್ವದ ಹತ್ತು ಸುಂದರಿಯರ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 9ನೇ ಸ್ಥಾನ ಪಡೆದಿದ್ದಾರೆ.
ಕನ್ನಡತಿಯಾಗಿರುವ ದೀಪಿಕಾ ಪಡುಕೋಣೆ ಹಿಂದಿ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಜನ ಪ್ರಿಯತೆ ಗಳಿಸಿದ್ದು, ಬಾಲಿವುಡ್ ನಟಿಯರ ಪೈಕಿ ಕೇವಲ ದೀಪಿಕಾ ಪಡುಕೋಣೆ ಮಾತ್ರ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಿಟನ್ ನಟಿ ಜೂಡಿ ಕಮರ್ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.