ಅರಂತೋಡು: ಕೆಪಿಸಿಸಿ ಸದಸ್ಯ ನಂದಕುಮಾರ್ ರನ್ನು ಭೇಟಿ ಮಾಡಿದ ಸ್ಪೋರ್ಟ್ಸ್‌ ಕ್ಲಬ್ ಸದಸ್ಯರು

(ನ್ಯೂಸ್ ಕಡಬ) newskadaba.com ಅರಂತೋಡು, ಸೆ. 24. ಅರಂತೋಡು ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ (ರಿ) ಸದಸ್ಯರು ಕೆಪಿಸಿಸಿ ಸದಸ್ಯ ಹೆಚ್ ಎಂ.ನಂದಕುಮಾರ್ ರವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು.

ಅವರು ಸುಳ್ಯದಿಂದ ಮಡಿಕೇರಿ ತೆರಳುವ ಸಂದರ್ಭ ಅರಂತೋಡಿಗೆ ಆಗಮಿಸಿ ಕ್ಲಬಿನ ಸದಸ್ಯರನ್ನು ಭೇಟಿ ಮಾಡಿ ಅರಂತೋಡು ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ನೊಂದಣಿಗೊಳ್ಳುತ್ತಿದ್ದು, ಹಲವಾರು ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮವನ್ನು ಅಯೋಜಿಸುವ ಯೋಜನೆಯನ್ನು ಇಟ್ಟುಕೊಂಡಿದ್ದೇವೆ ಎಂದು ಕ್ಲಬಿನ ಸದಸ್ಯರು ವಿವರಿಸಿದಾಗ ನಂದಕುಮಾರ್ ರವರು ತನ್ನಿಂದ ಆಗುವ ಸಹಾಯವನ್ನು ನೀಡುವ ಭರವಸೆಯನ್ನು ನೀಡಿ ನೋಂದಣಿಗೆ ಆಗುವ ವೆಚ್ಚವನ್ನು ನೀಡಿ ತೆರಳಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಅನಾರೋಗ್ಯದಿಂದ ಚಿಕಿತ್ಸೆಯಲ್ಲಿದ್ದ ಅರಂತೋಡಿನ ಬಾಲಕಿ ಖುಷಿ ಅವರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್ ಶಹೀದ್ ತೆಕ್ಕಿಲ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಸದಸ್ಯ ತಾಜುದ್ದೀನ್ ಅರಂತೋಡು, ಅರಂತೋಡು ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ ಕಾರ್ಯದರ್ಶಿ ಫಯಾಜ್ ಪಟೇಲ್, ಸದಸ್ಯರಾದ ಶರಪುದ್ದೀನ್, ಸುಳ್ಯ ವಿಧಾನಸಭಾ ಕ್ಷೇತ್ರ ಎನ್ಎಸ್ ಯು ಐ ಮಾಜಿ ಉಪಾಧ್ಯಕ್ಷ ಆಶಿಕ್ ಕುಕ್ಕುಂಬಳ, ಜುಬೈರ್, ಮುಹ್ಸೀನ್, ನೌಫಲ್ ಕುನ್ನಿಲ್, ಲತೀಫ್ ಮೊಟ್ಟಂಗಾರ್, ಅಮೀರ್ ಗೂನಡ್ಕ, ಖುಷಿಯವರ ತಂದೆ ಯೋಗೀಶ, ತಾಯಿ ರೇಶ್ಮಾ ಮುಂತಾದವರು ಜೊತೆಗಿದ್ದರು.

Also Read  SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!    ➤ ಶೇ. 10ರಷ್ಟು ಗ್ರೇಸ್‌ ಮಾರ್ಕ್ಸ್

error: Content is protected !!
Scroll to Top