(ನ್ಯೂಸ್ ಕಡಬ) newskadaba.com ಜಮ್ಮು, ಆ. 17. ಒಂದೇ ಕುಟುಂಬದ ಆರು ಮಂದಿ ಶವವಾಗಿ ಪತ್ತೆಯಾದ ಘಟನೆ ಜಮ್ಮುವಿನ ಸಿದ್ರಾ ಪ್ರದೇಶದ ಮನೆಯಲ್ಲಿ ನಡೆದಿದೆ.
ಆರು ಮಂದಿಯ ಮೃತದೇಹಗಳನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದ್ದು, ವಿವರಗಳಿಗಾಗಿ ಕಾಯಲಾಗುತ್ತಿದೆ. ಇನ್ನು ಆರು ಮಂದಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯಕೀಯ ವರದಿಯಿಂದಷ್ಟೇ ತಿಳಿದು ಬರಬೇಕಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.