(ನ್ಯೂಸ್ ಕಡಬ) newskadaba.com ಕಡಬ, ಆ. 16. ಇತ್ತಂಡಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
ಬಂಧಿತನನ್ನು ನೌಫಲ್(29) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಮೊಹಮ್ಮದ್ ನವಾಜ್ ಎಂಬಾತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ನವಾಝ್ ಎಂಬಾತ ಆ.15 ರಂದು ಸಂಜೆ ವೇಳೆ ಮೊಬೈಲ್ ರಿಚಾರ್ಜ್ ಖಾಲಿಯಾಗಿದ್ದರಿಂದ ಮನೆಯ ಪಕ್ಕದಲ್ಲಿರುವ ನೌಫಲ್ ಎಂಬಾತನ ಅಂಗಡಿಗೆ ಹೋಗಿ ಫೋನ್ ಫೇ ಮೂಲಕ 50 ರೂ. ರಿಚಾರ್ಜ್ ಮಾಡಲು ಹೇಳಿದ್ದು, ಈ ವೇಳೆ ನೌಫಲ್ ನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಹಿಂದಿ ಮಾತನಾಡುವ ಕೆಲಸಗಾರರು ಫೋನ್ ಫೇ ಇಲ್ಲ ಎಂದು ತಿಳಿಸಿದ್ದಾರೆ. ಬಳಿಕ ನವಾಝ್ ಆತೂರು ಮಸೀದಿ ಬಳಿಯ ಶಾಪ್ ನಲ್ಲಿ ರಿಚಾರ್ಜ್ ಮಾಡಿಸಿದ್ದಾನೆ. ನಂತರ ಸಂಜೆ ನವಾಜ್ ನ ಸಹೋದರ ಕರೆ ಮಾಡಿ ನೀನು ಯಾಕೇ ನೌಫಲ್ ನ ಅಂಗಡಿಗೆ ಹೋಗಿದ್ದು, ಆತ ನನಗೆ ಕರೆ ಮಾಡಿ ಅವಾಚ್ಯವಾಗಿ ಬೈಯುತ್ತಿದ್ದಾನೆ ಎಂದು ಹೇಳಿದ್ದಾನೆ. ಈ ವೇಳೆ ನವಾಜ್, ನೌಫಲ್ ಗೆ ಕರೆ ಮಾಡಿ ನೀನು ಯಾಕೆ ಸಹೋದರನಿಗೆ ಬೈದದ್ದು ಎಂದು ಕೇಳಿ, ನೀನು ಅಂಗಡಿ ಹತ್ತಿರ ಬಾ ಮಾತನಾಡಲು ಇದೆ ಎಂದು ಹೇಳಿ ಕರೆಸಿ, 6 ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಮೀನು ವ್ಯಾಪಾರಕ್ಕೆ ಸಂಬಂದಿಸಿದ ಗಲಾಟೆಗೆ ಸಂಬಂದಿಸಿದಂತೆ ನನ್ನ ತಮ್ಮ ಸಿನಾನ್ ಬಗ್ಗೆ ನೀನು ಯಾಕೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಂದು ಕೇಳಿ ಅವಾಚ್ಯ ಶಬ್ಧಗಳಿಂದ ಬೈದು, ಕಾಲರ್ ಹಿಡಿದು ಗಲಾಟೆ ಮಾಡಿ ನಂತರ ಅಂಗಡಿಯಲ್ಲಿದ್ದ ಚಾಕುವಿನಿಂದ ಹೊಟ್ಟೆಗೆ ಚುಚ್ಚಿರುವುದಾಗಿ ನವಾಝ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.