ಊಟದ ತಟ್ಟೆಯನ್ನು ಹಿಡಿದು ಕಣ್ಣೀರು ಹಾಕಿದ ಕಾನ್ಸ್‌ಟೇಬಲ್ ➤‌ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಆ. 11. ಪೊಲೀಸ್​​ ಮೆಸ್​ನಲ್ಲಿ ಉಣಬಡಿಸಿದ ಕಳಪೆ ಆಹಾರದ ತಟ್ಟೆಯನ್ನು ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಪೇದೆಯೋರ್ವ ಕಣ್ಣೀರು ಸುರಿಸಿದ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್ ನಲ್ಲಿ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅನ್ನ, ದಾಲ್​ ಮತ್ತು ರೋಟಿ ಇರುವ ಊಟದ ತಟ್ಟೆಯನ್ನು ಹಿಡಿದು ಕಾನ್ಸ್​ಟೇಬಲ್​ ಮನೋಜ್​ ಕುಮಾರ್​ ಎಂಬವರು ರಸ್ತೆ ಮಧ್ಯೆ ನಿಂತು ಕಣ್ಣೀರಿಟ್ಟಿದ್ದಾರೆ. ‘ನಾನು ಅನೇಕ ಬಾರಿ ಊಟದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೆಲಸದಿಂದ ತೆಗೆದು ಹಾಕುವುದಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಪೌಷ್ಠಿಕ ಆಹಾರಕ್ಕಾಗಿ ರಾಜ್ಯ ಸರ್ಕಾರ ಭತ್ಯೆ ನೀಡುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆಯೇ ಘೋಷಿಸಿದ್ದರು. ಆದರೆ ದೀರ್ಘಾವಧಿ ಕರ್ತವ್ಯ ಮಾಡುವ ನಮಗೆ ಬಳುವಳಿಯಾಗಿ ಸಿಗುವುದು ಇದೇ’ ಎಂದು ಅಳಲು ತೋಡಿಕೊಂಡಿದ್ದಾರೆ.

Also Read  ಹೆಣ್ಣು ಭ್ರೂಣ ಹತ್ಯೆ ಪ್ರಕರಣ- 12 ಆರೋಪಿಗಳು ಅರೆಸ್ಟ್..!   23 ಲಕ್ಷ ಮೌಲ್ಯದ ವಸ್ತುಗಳು ವಶ

error: Content is protected !!
Scroll to Top