ಕುಂತೂರು: ಮಾರ್- ಇವಾನಿಯೋಸ್ ಕಾಲೇಜಿನಲ್ಲಿ ‘ಅಝಾದಿ ಕಾ ಅಮೃತ್ ಮಹೋತ್ಸವ’ ಸ್ಪರ್ಧಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕುಂತೂರು, ಆ. 10. ಮಾರ್ ಇವಾನಿಯೋಸ್ ಶಿಕ್ಷಕ- ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಆಜಾದೀ ಕಾ ಅಮೃತ್ ಮಹೋತ್ಸವ’ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

 


ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಪ್ರಶಿಕ್ಷಣಾರ್ಥಿಗಳನ್ನು ಮಂಗಳೂರು ವಿಶ್ವವಿದ್ಯಾಲಯದ ವಲಯ ಮಟ್ಟದಲ್ಲಿ ನಡೆಯುವ ಸ್ವರ್ಧೆಗಳಿಗೆ ಆಯ್ಕೆ ಮಾಡಲಾಯಿತು. ಅದರಂತೆ ಆಯ್ಕೆ ಮಾಡಲಾದ ಪ್ರಶಿಕ್ಷಣಾರ್ಥಿಗಳ ವಿವರ:-
1. ಚರ್ಚಾ ಸ್ಪರ್ಧೆ: ದೀಪಶ್ರೀ ಎಸ್ ಮತ್ತು ನಿಶ್ಮಿತಾ
2. ಪೋಸ್ಟರ್ ತಯಾರಿ: ರಶ್ಮಿ ಎಸ್
3. ಪ್ರಬಂಧ ರಚನೆ: ತೇಜಸ್ವಿನಿ
4. ಪೈಂಟಿಂಗ್ : ಶ್ವೇತಾ ಪಿ.ಕೆ
5. ದೇಶಭಕ್ತಿ ಗೀತೆ: ಅಕ್ಷತಾ ಎಸ್
6. ಕಿರು ನಾಟಕ: 15 ಪ್ರಶಿಕ್ಷಣಾರ್ಥಿಗಳ ತಂಡ

Also Read  ಆತೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ


ವಲಯ ಮಟ್ಟದಲ್ಲಿ ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದ ಪೈಂಟಿಂಗ್ ಸ್ಪರ್ಧೆಯಲ್ಲಿ ಶ್ವೇತ ಪಿ.ಕೆ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದು ಅಂತರ್ ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಎಸ್.ಡಿ.ಎಮ್ ಕಾಲೇಜು, ಉಜಿರೆ ಇಲ್ಲಿ ನಡೆದ ವಲಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತೇಜಸ್ವಿನಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ಅಂತರ್ ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದ ವಲಯ ಮಟ್ಟದ ಕಿರುನಾಟಕ ಸ್ಪರ್ಧೆಯಲ್ಲಿ 15 ಪ್ರಶಿಕ್ಷಣಾರ್ಥಿಗಳ ತಂಡವು ಭಾಗವಹಿಸಿ ಚತುರ್ಥ ಸ್ಥಾನವನ್ನು ಪಡೆದು ಅಂತರ್ ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

error: Content is protected !!
Scroll to Top