ಮಂಗಳೂರು: ನಾಲ್ವರನ್ನು ಕೊಂದ ಆರೋಪಿ ಪ್ರವೀಣ್ ನನ್ನು ಬಿಡುಗಡೆಗೊಳಿಸಬೇಡಿ ➤ ಪತ್ನಿ ಹಾಗೂ ಕುಟುಂಬಸ್ಥರಿಂದ ಆಯುಕ್ತರಿಗೆ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 09. 1994ರಲ್ಲಿ ವಾಮಂಜೂರಿನಲ್ಲಿ ತನ್ನ ಚಿಕ್ಕಮ್ಮ ಸೇರಿದಂತೆ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರವೀಣ್ ಕುಮಾರ್ ಅವರನ್ನು ಬಿಡುಗಡೆಗೊಳಿಸುವುದಕ್ಕೆ ಕುಟುಂಬಸ್ಥರು ವಿರೋಧಿಸಿದ್ದಾರೆ.

 

1994ರ ಫೆಬ್ರವರಿ 23 ರಂದು ರಾತ್ರಿ ಪ್ರವೀಣ್ ವಾಮಂಜೂರಿನ ತನ್ನ ಸಂಬಂಧಿಕರಾದ ಅಪ್ಪಿ ಶೇರಿಗಾರ್ತಿ(75) ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಅವರನ್ನು ಮನೆಯಲ್ಲಿ ಮಲಗಿದ್ದ ಸಂದರ್ಭ ಬರ್ಬರವಾಗಿ ಕೊಲೆಗೈದು ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿ, ಬಳಿಕ ಪೊಲೀಸರ ಅತಿಥಿಯಾಗಿದ್ದ. ಇದೀಗ ನಾಲ್ಕು ಕೊಲೆಗಳ ಅಪರಾಧಿ ಪ್ರವೀಣನ ಬಿಡುಗಡೆಗೆ ಸಂಬಂಧಿಸಿದಂತೆ, ಜಿಲ್ಲಾಡಳಿತ ವತಿಯಿಂದ ಆಕ್ಷೇಪಣೆ ಸಲ್ಲಿಸಲು ಪತ್ನಿ ಸೇರಿದಂತೆ ಕುಟುಂಬಸ್ಥರು ಕಮಿಷನರ್ ಕಚೇರಿಗೆ ತೆರಳಿದ್ದು, ಈ ಕುರಿತು ಮಾತನಾಡಿದ ಆಯುಕ್ತ ಎನ್.ಶಶಿಕುಮಾರ್, ನ್ಯಾಯಾಲಯ ಪ್ರವೀಣ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆತನನ್ನು ಬಿಡುಗಡೆ ಮಾಡಬಾರದು ಎಂದು ಸಂತ್ರಸ್ತ ಕುಟುಂಬ ಸದಸ್ಯರು ನಮ್ಮನ್ನು ಸಂಪರ್ಕಿಸಿದರು. ಇದನ್ನು ಸರಕಾರ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಪ್ರವೀಣ್ ಜೈಲಿನಿಂದ ಹೊರಗೆ ಬಂದರೆ ಆತನಿಂದ ಜೀವ ಬೆದರಿಕೆ ಇದೆ ಎಂದು ಪ್ರವೀಣ್ ಪತ್ನಿ ಹೇಳಿಕೆ ನೀಡಿದ್ದಾಳೆ.

Also Read  ಎಂಟು ಮಂದಿ ಶಾಸಕರಿಂದ ಸಚಿವರಾಗಿ ಪ್ರಮಾಣವಚನ ಸ್ವೀಕಾರ

error: Content is protected !!
Scroll to Top