ವಾಹನ ಸಂಚಾರ ಪ್ರಶ್ನಿಸಿದಕ್ಕೆ ಜೀವಬೆದರಿಕೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 05. ಶಿರಾಡಿ ಘಾಟಿ ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು ಆದರೆ, ಕೆಲವೊಂದು ವಾಹನಗಳು ಸಂಚರಿಸುತ್ತಿರುವುದನ್ನು ಖಂಡಿಸಿ, ಪ್ರಶ್ನಿಸಿದಕ್ಕೆ ಜೀವಬೆದರಿಕೆ ಒಡ್ಡಲಾಗಿದೆ ಎಂದು ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಗೌರವಾಧ್ಯಕ್ಷ ಮೊಯ್ದೀನ್ ಸಾಹೇಬ್ ಕೆ. ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ತನ್ನ ಬಗ್ಗೆ ಧ್ವನಿ ಮುದ್ರಿತ ಸುಳ್ಳು ಆರೋಪಗಳ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ ಮಾನಹಾನಿ ಮಾಡುತ್ತಿದ್ದಾರೆ. ಕೆಲವೊಂದು ವಾಹನ ಚಾಲಕರು ತನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಅಂಥವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Also Read  ಮಾಜಿ ಸಿಎಂ ಜಯಲಲಿತಾರಿಂದ ವಶಪಡಿಸಿಕೊಂಡ ಅಮೂಲ್ಯ ವಸ್ತುಗಳು: ಫೆಬ್ರವರಿ 14-15ಕ್ಕೆ ತಮಿಳು ನಾಡು ಸರ್ಕಾರಕ್ಕೆ ಹಸ್ತಾಂತರಕ್ಕೆ ಆದೇಶ

error: Content is protected !!
Scroll to Top