ಕುಂತೂರು: ಮಾರ್- ಇವಾನಿಯೋಸ್ ಕಾಲೇಜಿನಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕುಂತೂರು, ಆ. 04. ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ತುಳುನಾಡಿನಲ್ಲಿ ಸಾಂಪ್ರದಾಯಕವಾಗಿ ಆಚರಿಸಲಾಗುತ್ತಿರುವ ಆಷಾಡ ಮಾಸದ ವಿಶಿಷ್ಟತೆಗಳನ್ನು ಬಿಂಬಿಸುವ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಯಿತು.


ಕಾಲೇಜಿನ ಸಮಾಜ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವನ್ನು ಕಾಲೇಜಿನ ಸಂಚಾಲಕರಾದ ವಂ|ಫಾ|ಡಾ ಎಲ್ದೋ ಪುತ್ತನ್‍ಕಂಡತ್ತಿಲ್ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಹಿಂಗಾರವನ್ನು ಅರಳಿಸಿ, ದೀಪ ಬೆಳಗಿಸಿ ಉದ್ಘಾಟಿಸಿದರು. ತದನಂತರ ಮಾತನಾಡುತ್ತಾ ತುಳುನಾಡಿನಲ್ಲಿ ಸಾಂಪ್ರದಾಯಕವಾಗಿ ಆಚರಿಸಿಕೊಂಡು ಬರುತ್ತಿರುವ ಹಬ್ಬ-ಉತ್ಸವಗಳಂತೆ ಆಷಾಡ ಮಾಸದಲ್ಲಿನ ಆಟಿ ಆಚರಣೆಯೂ ಜನರಲ್ಲಿ ಹಬ್ಬದ ಖುಷಿ, ಸಂಭ್ರಮ-ಸಂತೋಷವನ್ನು ಪರಸ್ಪರ ಹಂಚಿಕೂಂಡು ಸಾಮರಸ್ಯದಿಂದ ಜೀವನ ಸಾಗಿಸುವಂತಾಗಲು ಶಿಕ್ಷಣ ಸಂಸ್ಥೆಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣವನ್ನು ಮತ್ತು ಎಲ್ಲಾ ಧರ್ಮಗಳಲ್ಲಿ ಸಾಮರಸ್ಯವನ್ನು ನಿರ್ಮಾಣ ಮಾಡಲು ಪೂರಕ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಸಮಾಜ ವಿಜ್ಞಾನ ಸಂಘದ ಸಂಯೋಜಕ, ಪ್ರಾಧ್ಯಾಪಕರಾದ ಶ್ರೀಯುತ ಅಜಿತ್ ಉಮೇಶ್ ಕಾಮತ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಕು| ಲಿಖಿತ ಎಂ.ಬಿ ಆಟಿ ಆಚರಣೆಯ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಉಷಾ ಎಂ.ಎಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ “ಆಟಿ ಕಳೆಂಜ” ನೃತ್ಯ, ಜನಪದ ಹಾಡು, ಜನಪದ ನೃತ್ಯಗಳು, ಜನಪದ ಆಟಗಳು ವಿಶೇಷ ಆಕರ್ಷಣೆಯಾಗಿದ್ದವು. ಸಮಾಜ ವಿಜ್ಞಾನ ಸಂಘದ ಅಧ್ಯಕ್ಷೆ ಕು| ಐಡಾ ಸೆಬೆಸ್ಟಿಯನ್ ವಂದಿಸಿ, ಪ್ರಶಿಕ್ಷಣಾರ್ಥಿಗಳಾದ ಕು| ಪ್ರಕೃತಿ ಬಿ. ಜಿ ಮತ್ತು ಕು| ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಆಟಿಯ ಸಂದರ್ಭದಲ್ಲಿನ ರುಚಿಕರವಾದ ವೈವಿಧ್ಯಮಯ ತಿಂಡಿ-ತಿನಿಸು, ಖಾದ್ಯ ಪದಾರ್ಥಗಳನ್ನು ಭೋಜನದೊಂದಿಗೆ ಎಲ್ಲರಿಗೂ ಉಣಬಡಿಸಲಾಯಿತು.

Also Read  ಜೂ.14: ಇಂದು "ವಿಶ್ವ ರಕ್ತದಾನಿಗಳ ದಿನ" ► ಡಾ| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ

error: Content is protected !!
Scroll to Top