ಸುಬ್ರಹ್ಮಣ್ಯ: ಮಕ್ಕಳು ಮೃತಪಟ್ಟ ಕುಟುಂಬಕ್ಕೆ ಸರಕಾರದಿಂದ 11ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದ ಸಚಿವ ಎಸ್. ಅಂಗಾರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 02. ಇಲ್ಲಿನ ಪರ್ವತಮುಖಿ ಎಂಬಲ್ಲಿ ಗುಡ್ಡ ಜರಿದು ಮಣ್ಣಿನಡಿ ಸಿಲುಕಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ರೂ. 11 ಲಕ್ಷ 5 ಸಾವಿರ ಮೊತ್ತದ ಒಟ್ಟು 3 ಚೆಕ್ ನ್ನು ಸಚಿವ ಎಸ್. ಅಂಗಾರರವರು ಕುಸುಮಾಧರರಿಗೆ ಮಂಗಳವಾರದಂದು ವಿತರಿಸಿದ್ದಾರೆ.

ಮೃತಪಟ್ಟ ಇಬ್ಬರು‌ ಮಕ್ಕಳಿಗಾಗಿ ಸರಕಾರದಿಂದ ತಲಾ 5 ಲಕ್ಷದಂತೆ ಹಾಗೂ‌ ಮನೆ ನಾಶಕ್ಕಾಗಿ ಸರಕಾರ ನೀಡುವ ರೂ. 95ಸಾವಿರದ 100 ಹಾಗೂ ಮನೆಯೊಳಗಿದ್ದ ವಸ್ತುಗಳು ನಾಶವಾಗಿರುವುದಕ್ಕೆ ಸರಕಾರದಿಂದ ಕೊಡಮಾಡುವ ರೂ. 10 ಸಾವಿರ ಹೀಗೆ ಒಟ್ಟು 11 ಲಕ್ಷ 5 ಸಾವಿರದ 100 ರೂ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಡಬ ತಹಶೀಲ್ದಾರ್ ಅನಂತ ಶಂಕರ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಭಾರತಿ ದಿನೇಶ್, ಸುಬ್ರಹ್ಮಣ್ಯ ಐನೆಕಿದು ಸಹಕಾರಿ ಸಂಘದ ನಿರ್ದೇಶಕ ವೆಂಕಟೇಶ್ ಹೆಚ್.ಎಲ್., ಸುಬ್ರಹ್ಮಣ್ಯದ ಉದ್ಯಮಿ ರವಿ ಕಕ್ಕೆಪದವು ಹಾಗೂ ಬಿಜೆಪಿಯ ಪ್ರಮುಖರು ಜೊತೆಗಿದ್ದರು.

Also Read  ಮಂಗಳೂರು: ಅತಿಥಿ ಶಿಕ್ಷಕರನ್ನು ಕಾಯಂ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

error: Content is protected !!
Scroll to Top