ಮನೆಮೇಲೆ ಕುಸಿದ ಮಣ್ಣು ➤ ಅವಶೇಷಗಳಡಿಯಲ್ಲಿ ಸಿಲುಕಿದ ನಾಲ್ವರು

(ನ್ಯೂಸ್ ಕಡಬ) newskadaba.com ಭಟ್ಕಳ, ಆ. 02. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಗುಡ್ಡದ ಮೇಲಿನಿಂದ ಭಾರೀ ಪ್ರಮಾಣದ ಮಣ್ಣು ಮನೆಮೇಲೆ ಕುಸಿದ ಪರಿಣಾಮ ಮನೆ ಸಂಪೂರ್ಣ ನಾಶವಾಗಿ ನಾಲ್ವರು ಸಿಲುಕಿರುವ ಘಟನೆ ಮುಟ್ಟಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮನೆಯಲ್ಲಿದ್ದ ಲಕ್ಷ್ಮೀ ನಾರಾಯಣ ನಾಯ್ಕ(48), ಲಕ್ಷ್ಮಿ ನಾಯ್ಕ (33), ಅನಂತ ನಾರಾಯಣ ನಾಯ್ಕ (32) ಪ್ರವೀಣ ಬಾಲಕೃಷ್ಣ ನಾಯ್ಕ (20) ಎಂಬವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಆರಂಭವಾಗಿದೆ ಎಂದು ತಿಳಿದುಬಂದಿದೆ.

Scroll to Top