ನೆಟ್ಟಣ: ರೈಲ್ವೇ ಮೇಲ್ಸೇತುವೆಯಿಂದ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com  ಕಡಬ, ನ.13. ಇಲ್ಲಿನ ಸುಬ್ರಹ್ಮಣ್ಯ ರೋಡ್ ರೈಲ್ವೇ ಮೇಲ್ಸೇತುವೆಯಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸೋಮವಾರ ಸಂಜೆ ಬೆಳಕಿಗೆ ಬಂದಿದೆ.

ಮೃತನನ್ನು ಮಧ್ಯಪ್ರದೇಶದ ಜಬಲ್ಪುರದ ಬರ್ಗಿ ತಾಲೂಕು ನಿವಾಸಿ ಸುನಿಲ್ ಭುವಿಯಾ(26) ಎಂದು ಗುರುತಿಸಲಾಗಿದೆ. ಈತ ತನ್ನ ಸಂಗಡಿಗರೊಂದಿಗೆ ರೈಲ್ವೇ ಕಾಮಗಾರಿಗೆಂದು ಬಂದಿದ್ದು, ಭಾನುವಾರ ಸಂಜೆ ಮದ್ಯಪಾನ ಮಾಡಲೆಂದು ತೆರಳಿದ್ದು, ಹಿಂತಿರುಗಿ ಬಂದಿಲ್ಲವೆನ್ನಲಾಗಿದೆ. ಸೋಮವಾರದಂದು ಈತನನ್ನು ಹುಡುಕಾಡಿದಾಗ ರೈಲ್ವೇ ಮೇಲ್ಸೇತುವೆಯ ಕೆಳಗಿನ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕುಡಿತದ ಅಮಲಿನಲ್ಲಿ ಕೆಳಗಡೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಕೊರೋನ ಭೀತಿ ಹಿನ್ನೆಲೆ: ಮನಪಾ ವ್ಯಾಪ್ತಿಯ ಎಲ್ಲ ಸೆಲೂನ್, ಬ್ಯೂಟಿ ಪಾರ್ಲರ್ ನಾಳೆಯಿಂದ ಬಂದ್

 

error: Content is protected !!