ಸವಣೂರು: ಹುಚ್ಚುನಾಯಿ ಕಡಿತ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಸವಣೂರು, ಜು. 22. ಹುಚ್ಚು ನಾಯಿ ಕಡಿತಕ್ಕೊಳಗಾಗಿ ಇಬ್ಬರು ಗಾಯಗೊಂಡ ಘಟನೆ ಸವಣೂರು ಸಮೀಪದ ಶಾಂತಿನಗರದಲ್ಲಿ ನಡೆದಿದೆ.

ಶಾಂತಿನಗರದ ಸಮೀರ್ ಹಾಗೂ ಹಸೈನ್ ಎಂಬವರಿಗೆ ಹುಚ್ಚು ನಾಯಿ ಕಚ್ಚಿದ್ದು, ಸ್ಥಳೀಯವಾಗಿ ಎರಡು ಆಡುಗಳಿಗೆ ಹಾಗೂ ಬೆಕ್ಕುಗಳಿಗೆ ಇದೇ ಹುಚ್ಚು ನಾಯಿ ಕಡಿದಿರುವುದಾಗಿ ತಿಳಿದು ಬಂದಿದೆ. ನಾಯಿಯು ಮಗುವಿನ ಮೇಲೆ ದಾಳಿ ಮಾಡಿದ್ದು, ಮಗುವನ್ನು ರಕ್ಷಿಸುವ ಸಂದರ್ಭ ಓರ್ವನಿಗೆ ನಾಯಿ ಕಚ್ಚಿರುವುದಾಗಿ ತಿಳಿದು ಬಂದಿದೆ. ಹುಚ್ಚು ನಾಯಿ ರಂಪಾಟದಿಂದ ಸ್ಥಳೀಯರು ಭಯಭೀತಗೊಂಡಿದ್ದು ಮನೆಯಿಂದ ಹೊರಬರಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಶಾಲೆ, ಮದರಸಗಳಿಗೆ ತೆರಳುವ ಮಕ್ಕಳು ಭಯಭೀತಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಸ್ಥಳೀಯ ಗ್ರಾಮ ಪಂಚಾಯತ್ ತುರ್ತು ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Also Read  ಲಾಕ್ ಡೌನ್ ನಡುವೆಯೂ ಸಮಾಧಾನಕರ ಸುದ್ದಿ ➤ ಮಧ್ಯಾಹ್ನ 12ರ ವರೆಗೆ ದಿನಬಳಕೆಯ ಅಂಗಡಿ ತೆರೆಯಲು ಅವಕಾಶ

error: Content is protected !!
Scroll to Top