ವಿಟ್ಲ: ಅಕ್ರಮ ಗೋಸಾಗಾಟ ಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಜು. 22. ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಿಡಿದು ವಿಟ್ಲ ಪೊಲೀಸರಿಗೆ ಒಪ್ಪಿಸಿದ ಘಟನೆ ಪದವು ಕೋಡಂದೂರು ರಸ್ತೆಯಲ್ಲಿ ನಡೆದಿದೆ.


ಆಲ್ಟೋ ಕಾರಿನಲ್ಲಿ ಹಿಂಸಾತ್ಮಕವಾಗಿ ಎರಡು ಗೋವುಗಳನ್ನು ಕೂಡಿ ಹಾಕಿ ಸಾಗಾಟ ಮಾಡಲಾಗುತ್ತಿತ್ತು ಎಂದೆನ್ನಲಾಗಿದೆ. ವಾಹನದಲ್ಲಿದ್ದವರು ಪರಾರಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ‌ ವಿಟ್ಲ ಠಾಣಾ ಪೊಲೀಸರು ಆಲ್ಟೋ ಕಾರು ಹಾಗೂ ಜಾನುವಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Also Read  ಕೊೖಲ: ಊರಿನ ಹಿರಿಯ ನಾಗರೀಕ ಐತ್ತಪ್ಪ ನಾಯ್ಕ ಅವರಿಗೆ ಸನ್ಮಾನ

error: Content is protected !!
Scroll to Top