ಬಂಟ್ವಾಳ: 30 ಅಡಿ ಆಳಕ್ಕೆ ಉರುಳಿಬಿದ್ದ ಕಾರು ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 20. ನಿದ್ದೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ 30 ಅಡಿ ಆಳದ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಕಾರು ಚಾಲಕ ಕುಶಾಂತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ವೃತ್ತಿಯಲ್ಲಿ ಜನರೇಟರ್ ಮೆಕ್ಯಾನಿಕ್ ಕೆಲಸಗಾರನಾಗಿದ್ದ ಇವರು, ಉಡುಪಿಯಲ್ಲಿ ಜನರೇಟರ್ ರಿಪೇರಿ ಮುಗಿಸಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

Also Read  ಬಲ್ಯ: ತೀವ್ರ ಅಸೌಖ್ಯದಿಂದ ಯುವಕ ಮೃತ್ಯು

error: Content is protected !!
Scroll to Top