ಸರಕಾರಿ ಶಾಲಾ ಮಕ್ಕಳಿಗೆ ವಾಹನ ಭಾಗ್ಯ ➤ ಸಿಹಿಸುದ್ದಿ ನೀಡಿದ ರಾಜ್ಯ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 01. ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೂ ವಾಹನ ಸೌಲಭ್ಯ ದೊರಕಲಿದ್ದು, ಸರಕಾರಿ ಶಾಲಾ ಮಕ್ಕಳನ್ನು ಕರೆತರಲು ವಾಹನ ಖರೀದಿಗೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಸರ್ಕಾರಿ ಶಾಲಾ ಮಕ್ಕಳ ವಾಹನ ಖರೀದಿಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವೆಚ್ಚ ಭರಿಸಲು ಸೂಚಿಸಲಾಗಿದೆ. ಶಾಲಾ ವಾಹನದ ಚಾಲಕರ ವೇತನ ಹಾಗೂ ಪೆಟ್ರೋಲ್ ಮತ್ತು ದುರಸ್ತಿ ವೆಚ್ಚಗಳನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು ಇತರೆ ಅನುದಾನದಡಿ ಭರಿಸಬಹುದು ಎಂದು ಷರತ್ತು ವಿಧಿಸಲಾಗಿದೆ.

Also Read  ಬೆಂಗಳೂರು: ಶೀಘ್ರದಲ್ಲೇ ಆಟೋ ದರಲ್ಲೂ ಏರಿಕೆ, ಪ್ರತಿ ಕಿ.ಮೀಗೆ 5 ರೂ. ಹೆಚ್ಚಳ ಸಾಧ್ಯತೆ..!

 

error: Content is protected !!
Scroll to Top