ತಂಡದಿಂದ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ➤ ವ್ಯಾನ್ ನಿಂದ ಜಿಗಿದು ಬಾಲಕಿ ಪರಾರಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 30. ಆರನೇ ತರಗತಿಯ ಬಾಲಕಿಯೋರ್ವಳನ್ನು ತಂಡವೊಂದು ಅಪಹರಣಕ್ಕೆ ಯತ್ನಿಸಿದ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯಾರ್ಥಿನಿಯು ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ, ಓಮ್ನಿ ಕಾರಿನಲ್ಲಿ ಕಾದು ನಿಂತಿದ್ದ ಐದು ಮಂದಿಯ ತಂಡವೊಂದು ಆಕೆಯನ್ನು ಬಲವಂತವಾಗಿ ಎಳೆದೊಯ್ದು ಅಂಗಡಿ ಪದವು ರಸ್ತೆಯಲ್ಲಿ ಪರಾರಿಯಾಗಿದ್ದಾರೆ. ಆದರೆ ಅದೃಷ್ಟವಶಾತ್ ಎದುರುಗಡೆಯಿಂದ ಟ್ರಕ್ ಬರುತ್ತಿದ್ದು, ಓಮ್ನಿಯ ವೇಗ ತಗ್ಗಿದಾಗ ಬಾಲಕಿ ಬಾಗಿಲು ತೆರೆದು ವ್ಯಾನ್‌ನಿಂದ ಜಿಗಿದಿದ್ದಾಳೆ. ಬಳಿಕ ಹೊಸಂಗಡಿಯಲ್ಲಿರುವ ತನ್ನ ಸಂಬಂಧಿಕರ ಮೂಲಕ ತನ್ನ ತಂದೆಗೆ ವಿಷಯ ತಿಳಿಸಿದ್ದು, ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಮಂಜೇಶ್ವರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Also Read  ಕಡಬ: ಸಿನಿಮೀಯ ಶೈಲಿಯಲ್ಲಿ ಬೈಕಿಗೆ ಢಿಕ್ಕಿ ಹೊಡೆದ ಕಾರು

error: Content is protected !!
Scroll to Top