(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ. 30. ಆರ್ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಇಪ್ಪತ್ತಕ್ಕೂ ಹೆಚ್ಚು ವೈಟ್ ಬೋರ್ಡ್ ಟ್ಯಾಕ್ಸಿಗಳ ಮೇಲೆ ದಂಡ ಹಾಕಿ ದಾಖಲೆಗಳನ್ನು ವಶಪಡಿಸಿಕೊಂಡ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.
ಕಾನೂನು ಪ್ರಕಾರ ವೈಟ್ ಬೋರ್ಡ್ ವಾಹನಗಳು ಬಾಡಿಗೆಗೆ ತೆರಳುವಂತಿಲ್ಲ. ಆದರೆ ಸುಬ್ರಹ್ಮಣ್ಯಕ್ಕೆ ಬರುವ ಹಾಗೂ ಸುಬ್ರಹ್ಮಣ್ಯದಿಂದ ಹೋಗುವ ಹಲವಾರು ವೈಟ್ ಬೋರ್ಡ್ ನ ವಾಹನಗಳು ಬಾಡಿಗೆ ನೆಲೆಯಲ್ಲಿ ಸಂಚರಿಸುತ್ತವೆ. ಇದು ಕಾನೂನಿಗೆ ವಿರುದ್ದವಾಗಿದ್ದು, ಹಳದಿ ಬೋರ್ಡ್ ವಾಹನ ಮಾಲೀಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಇದನ್ನರಿತ ಅಧಿಕಾರಿಗಳು ಬಾಡಿಗೆ ನೆಲೆಯಲ್ಲಿ ಬಂದ ವೈಟ್ ಬೋರ್ಡ್ ವಾಹನಗಳಿಗೆ ದಂಡ ವಿಧಿಸಿದ್ದಲ್ಲದೇ, ಬಾಡಿಗೆ ಮಾಡದಂತೆಯೂ ವಾರ್ನಿಂಗ್ ಮಾಡಿದ್ದಾರೆ. ಅಲ್ಲದೇ ಸುಬ್ರಹ್ಮಣ್ಯಕ್ಕೆ ದೂರದ ಊರಿಂದ ಬಂದವರಾಗಿದ್ದ ಕಾರಣ ವಾಹನ ವಶಕ್ಕೆ ಪಡೆಯದೇ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕಾರ್ಯಾಚರಣೆ ನಡೆಸಿ ವೈಟ್ ಬೋರ್ಡ್ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.