2021-22ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಿಸಿದ KSRTC

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 29. 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅವಧಿಯ ನಂತರವೂ ಪರೀಕ್ಷೆ ನಿಗದಿಯಾಗಿದ್ದು, ಈ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಪಾಸ್ ಅವಧಿಯನ್ನು ವಿಸ್ತರಿಸಿ ಕೆಎಸ್ಸಾರ್ಟಿಸಿ ಆದೇಶ ಹೊರಡಿಸಿದೆ.


ಈ ಬಗ್ಗೆ ಕೆಎಸ್ಸಾರ್ಟಿಸಿ ಪತ್ರಿಕಾ ಮಾಹಿತಿ ನೀಡಿದ್ದು, 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಗಸ್ಟ್, ಸೆಪ್ಟೆಂಬರ್, ನವೆಂಬರ್ ವರೆಗೂ ತರಗತಿಗಳು ಹಾಗೂ ಪರೀಕ್ಷೆ ನಡೆಯುವುದರಿಂದ ಬಸ್ ಪಾಸ್ ಅವಧಿಯನ್ನು ವಿಸ್ತರಿಸುವಂತೆ ಕೋರಲಾಗಿತ್ತು. ಈ ಹಿನ್ನೆಲೆ ಎಲ್ಲಾ ವರ್ಗದ ತರಗತಿಗಳು ನಡೆಯುತ್ತಿದ್ದಲ್ಲಿ ಅದನ್ನು ಖಚಿತಪಡಿಸಿಕೊಂಡು ಒಂದು ಅಥವಾ ಎರಡು ತಿಂಗಳ ಅವಧಿಗೆ ನಿಗದಿತ ಮೊತ್ತವನ್ನು ಪಾವತಿಸಿಕೊಂಡು ರಶೀದಿ ನೀಡುವುದು ಎಂದು ತಿಳಿಸಿದೆ. ವಿದ್ಯಾರ್ಥಿಗಳು ಪಡೆದಂತಹ ರಶೀದಿ ಹಾಗೂ ಹಳೆಯ ಪಾಸ್ ಎರಡನ್ನೂ ತೋರಿಸಿ ಪ್ರಯಾಣಿಸಬಹುದು. ಈ ಬಗ್ಗೆ ಎಲ್ಲಾ ಚಾಲಕ ನಿರ್ವಾಹಕ ಹಾಗೂ ತನಿಖಾ ಸಿಬ್ಬಂದಿಗಳು ಕ್ರಮವಹಿಸುವಂತೆ ಸೂಚಿಸಿದೆ.

Also Read  ಮಂಗಳೂರು: ಜುಲೈ 1ರಿಂದ ಕೆಲವು ಖಾಸಗಿ ಹಾಗೂ ಸಿಟಿ ಬಸ್‌ಗಳ ಸೇವೆ ಆರಂಭ

error: Content is protected !!
Scroll to Top