ಬಟ್ಟೆಯನ್ನು ನುಂಗಿದ ನಾಗರಹಾವು..!! ➤ ಸುರಕ್ಷಿತವಾಗಿ ಹೊರತೆಗೆದು ಕಾಡಿಗೆಬಿಟ್ಟ ಸ್ನೇಕ್ ಅಶೋಕ್

(ನ್ಯೂಸ್ ಕಡಬ) newskadaba.com ಕಳೆಂಜ, ಜೂ. 27. ಕಳೆಂಜ ಗ್ರಾಮದ ಶಾಲೆತ್ತಡ್ಕ ನಿವಾಸಿ ಅಶೋಕ್ ಪೂಜಾರಿ ಎಂಬವರ ಮನೆಯ ಪಕ್ಕದಲ್ಲಿ ನಾಗರಹಾವೊಂದು ಬಟ್ಟೆಯನ್ನು ನುಂಗಿದ ಘಟನೆ ವರದಿಯಾಗಿದೆ.


ಇದನ್ನು ಗಮನಿಸಿದ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಎಂಬವರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಧಾವಿಸಿದ ಅವರು ನಾಗರಹಾವನ್ನು ಹಿಡಿದು ನುಂಗಿದ್ದ ಬಟ್ಟೆಯನ್ನು ಹೊರತೆಗೆದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

error: Content is protected !!
Scroll to Top