ಪುಣೆ ಮೂಲದ ಮಹಿಳೆ ಮಲ್ಪೆ ಬೀಚ್ ನಲ್ಲಿ ಆತ್ಮಹತ್ಯೆಗೆ ಯತ್ನ..! ➤ ಜೀವರಕ್ಷಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಮಲ್ಪೆ, ಜೂ. 27. ಮಲ್ಪೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯನ್ನು ಲೈಫ್ ಗಾರ್ಡ್ ತಂಡ ರಕ್ಷಿಸಿದ ಘಟನೆ ಭಾನುವಾರದಂದು ಸಂಜೆ ನಡೆದಿದೆ.


ಮೂಲತಃ ಪುಣೆ ಮೂಲದ ಮಹಿಳೆಯೋರ್ವರು ತನ್ನ ಮಗನೊಂದಿಗೆ ಮಲ್ಪೆ ಬೀಚ್ ಗೆ ಬಂದು, ಅಲ್ಲಿ ಆತ್ಮಹತ್ಯೆ ಮಾಡುವ ಉದ್ದೇಶದಿಂದ ನೀರಿನತ್ತ ಓಡುತ್ತಿದ್ದರೆನ್ನಲಾಗಿದೆ‌. ಇದನ್ನು ಕಂಡ ಸ್ಥಳದಲ್ಲಿದ್ದ ಜೀವರಕ್ಷಕ ದಳದವರು ತಕ್ಷಣವೇ ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ ಮಹಿಳೆಯು ಮತ್ತೆ ಅದೇ ಪ್ರಯತ್ನ ಮುಂದುವರೆಸಿದಾಗ ಲೈಫ್ ಗಾರ್ಡ್ ತಂಡವು ಮಹಿಳೆ ಹಾಗೂ ಮಗನನ್ನು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.

Also Read  ಐಸಿಸ್ ನಲ್ಲಿ ಸಕ್ರಿಯವಾಗಿರುವ ಶಂಕೆ ➤ ಬೆಂಗಳೂರಿನ ದಂತವೈದ್ಯ ಅರೆಸ್ಟ್

error: Content is protected !!
Scroll to Top