ಬುಲ್ಡೋಝರ್ ರಾಜಕೀಯವನ್ನು ನಿಲ್ಲಿಸಿ ➤ ಸರಕಾರಿ ಪ್ರಾಯೋಜಿತ ದಬ್ಬಾಳಿಕೆಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ಭಿತ್ತಿಪತ್ರ ಪ್ರದರ್ಶನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 14. ಸಂವಿಧಾನಬಧ್ದ ಹಕ್ಕಾದ ಪ್ರತಿಭಟನೆಯನ್ನು ನಡೆಸಿದ ಜನಸಮುದಾಯದ ಮೇಲೆ ಸರಕಾರಿ ಪ್ರಾಯೋಜಿತವಾಗಿ ನಡೆಸುತ್ತಿರುವ ಬುಲ್ಡೋಜರ್ ರಾಜಕೀಯವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ವತಿಯಿಂದ ಬೆಳ್ತಂಗಡಿ ಸಮಿತಿ ವ್ಯಾಪ್ತಿಯ ಬಂಗೇರಕಟ್ಟೆ, ಪಾಂಡವರಕಲ್ಲು ಹಾಗೂ ಉಜಿರೆಯಲ್ಲಿ ಭಿತ್ತಿಪತ್ರ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ನಾಯಕ ನಾಸಿರ್, ಜಿಲ್ಲಾ ಸಮಿತಿ ಸದಸ್ಯರಾದಂತಹ ಬಾಕಿರ್, ಸಫ್ವಾನ್ ಹಾಗೂ ಮರ್ಷದ್ ಮೊದಲಾದವರು ಭಾಗವಹಿಸಿದ್ದರು.

Also Read  ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ ಆಯಾ ಶಾಲೆಗಳಲ್ಲೇ 5, 8ನೇ ಕ್ಲಾಸ್ ಬೋರ್ಡ್ ಪರೀಕ್ಷೆ

error: Content is protected !!
Scroll to Top