(ನ್ಯೂಸ್ ಕಡಬ) newskadaba.com ನೋಯ್ಡಾ, ಜೂ. 07. ಉ.ಪ್ರದೇಶದ ಲಕ್ನೋ ಮತ್ತು ಉನ್ನಾವೋದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಛೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಾಪ್ ನಲ್ಲಿ ಬೆದರಿಕೆ ಹಾಕಿದ ಕುರಿತು ಲಕ್ನೋದ ಮಡಿಯಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘದ ಸದಸ್ಯ ನೀಲಕಂಠ ತಿವಾರಿ ಎಂಬವರಿಗೆ ಬೆದರಿಕೆ ಸಂದೇಶವನ್ನು ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ರಾತ್ರಿ ಎಂಟು ಗಂಟೆಯ ವೇಳೆಗೆ ಅಂತರಾಷ್ಟ್ರೀಯ ಸಂಖ್ಯೆಯಿಂದ ಕಳುಹಿಸಲಾಗಿದ್ದು, ಸೈಬರ್ ಸೆಲ್ ಸಹಾಯದಿಂದ ಸಂದೇಶ ಕಳುಹಿಸಿದ ಸಂಖ್ಯೆಯನ್ನು ಪತ್ತೆಹಚ್ಚಲಾಗುವುದು ಎಂದು ಲಕ್ನೋ ಪೊಲೀಸರು ಹೇಳಿಕೆ ನೀಡಿದ್ದಾರೆ.