ಕಡಬದ ಜನತೆಯ ಜ್ಞಾನ ದೇಗುಲ ಸೈಂಟ್ ಜೋಕಿಮ್ಸ್ ವಿದ್ಯಾಲಯ ➤ 2022-23ನೇ ಸಾಲಿಗೆ ಪಿಯುಸಿ ದಾಖಲಾತಿ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.19. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವ ಕಡಬದ ಸೈಂಟ್ ಜೋಕಿಮ್ಸ್ ಸಮೂಹ ವಿದ್ಯಾ ಸಂಸ್ಥೆಯಲ್ಲಿ ವಿವಿಧ ಕೋರ್ಸ್ ಗಳಿಗೆ ಈಗಾಗಲೇ ದಾಖಲಾತಿ ಆರಂಭಗೊಂಡಿದ್ದು, ಸೀಮಿತ ಸೀಟುಗಳು ಬಾಕಿಯಾಗಿವೆ.

ಕ್ಯಾಥೊಲಿಕ್ ಬೋರ್ಡ್ ಆಫ್ ಎಜುಕೇಶನ್ ನ ಅಧೀನದಲ್ಲಿ ಕಳೆದ ಹಲವು ದಶಕಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿರುವ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ನೀಡಲಾಗುತ್ತಿದ್ದು, ಸೈಂಟ್ ಆನ್ಸ್ ವಿದ್ಯಾ ಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ.

ಪಿಯುಸಿ ವಿಭಾಗದಲ್ಲಿ ಕಾಮರ್ಸ್ ಹಾಗೂ ಸೈನ್ಸ್‌ ಕೋರ್ಸ್ ಗಳಿಗೆ 2022-23ನೇ ಸಾಲಿಗೆ ದಾಖಲಾತಿ ಆರಂಭಗೊಂಡಿದ್ದು, ಪ್ರಥಮ ಪಿಯುಸಿ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಹಾಗೂ ದ್ವಿತೀಯ ಪಿಯುಸಿ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಅಂಕ ಗಳಿಸಿದಲ್ಲಿ 50% ಶುಲ್ಕ ವಿನಾಯಿತ ದೊರೆಯಲಿದೆ. ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾಗುವ ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಸಿಗಲಿದೆ.

ನುರಿತ ಬೋಧಕರಿಂದ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಸಿಇಟಿ ಹಾಗೂ ನೀಟ್ ತರಬೇತಿ ದೊರೆಯಲಿದ್ದು, ಶಾಲಾ ಬಸ್ ವ್ಯವಸ್ಥೆ, ಸುಸಜ್ಜಿತ ಲ್ಯಾಬ್, ಉತ್ತಮ ಕ್ರೀಡಾಂಗಣದೊಂದಿಗೆ ವಿದ್ಯಾರ್ಥಿಗಳಿಗೆ ಪ್ರಶಾಂತ ವಾತಾವರಣದಲ್ಲಿ ಅತ್ಯುತ್ತಮ ಶಿಕ್ಷಣ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ 9901330232 (ಸಂಚಾಲಕರು) ಅಥವಾ 9731142964 (ಪ್ರಾಂಶುಪಾಲರು) ನ್ನು ಸಂಪರ್ಕಿಸಬಹುದು.

error: Content is protected !!

Join the Group

Join WhatsApp Group