ನೆಲ್ಯಾಡಿ: ಚಲಿಸುತ್ತಿದ್ದ ರಿಕ್ಷಾದ ಟಯರ್ ಗೆ ಸಿಲುಕಿದ ಚೂಡಿದಾರ್ ಶಾಲು ➤ ಮಹಿಳೆಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.10. ಚೂಡಿದಾರದ ಶಾಲು ಆಕಸ್ಮಿಕವಾಗಿ ರಿಕ್ಷಾದ ಟಯರ್ ಗೆ ಸಿಲುಕಿದ ಪರಿಣಾಮ ಮಹಿಳೆ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿರುವ ಘಟನೆ ಸೋಮವಾರದಂದು ಪುತ್ತೂರಿನಲ್ಲಿ ನಡೆದಿದೆ.

ಗಾಯಗೊಂಡ ಮಹಿಳೆಯನ್ನು ನೆಲ್ಯಾಡಿ ಗ್ರಾಮ ಪಂಚಾಯತ್ ಸಿಬ್ಬಂದಿ, ಕೊಣಾಲು ಕಲಾಯಿ ನಿವಾಸಿ ಲೀಲಾವತಿ(33) ಎಂದು ಗುರಿತಿಸಲಾತ. ಲೀಲಾವತಿಯವರು ಸೋಮವಾರ ಸಂಜೆ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಪುತ್ತೂರಿಗೆ ಬಂದಿದ್ದು, ರಿಕ್ಷಾದಲ್ಲಿ ಸಂಚರಿಸುತ್ತಿದ್ದ ವೇಳೆ ಲೀಲಾವತಿಯವರ ಚೂಡಿದಾರದ ಶಾಲು ಆಕಸ್ಮಿಕವಾಗಿ ರಿಕ್ಷಾದ ಟಯರ್ ಗೆ ಸಿಲುಕಿದೆ ಎನ್ನಲಾಗಿದೆ. ಪರಿಣಾಮ ರಿಕ್ಷಾದಿಂದ ಕೆಳಕ್ಕೆ ಬಿದ್ದಿದ್ದು, ಲೀಲಾವತಿಯವರ ಕುತ್ತಿಗೆಗೆ ಗಾಯವಾದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ.

Also Read  ನೆಲ್ಯಾಡಿ: ಬೈಕ್ ಢಿಕ್ಕಿ ► ಪಾದಚಾರಿ ಗಂಭೀರ

 

 

error: Content is protected !!