(ನ್ಯೂಸ್ ಕಡಬ) newskadaba.com ಕಡಬ, ಎ.28. ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ವ್ಯಕ್ತಿಯೋರ್ವರು ಎಪ್ರಿಲ್ 21 ರಿಂದ ನಾಪತ್ತೆಯಾಗಿದ್ದು, ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಲಾಗಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಬಿಳಿನೆಲೆ ಗ್ರಾಮದ ಮೆದಪೆರ್ಲ ನಿವಾಸಿ ಕುಮಾರ್ ಎಂಬವರ ಪುತ್ರ ಜಯನ್ ಎಂದು ಗುರುತಿಸಲಾಗಿದೆ. ಸದ್ರಿ ವ್ಯಕ್ತಿಯು ಎಪ್ರಿಲ್ 21 ರಿಂದ ಕಾಣೆಯಾಗಿದ್ದು, ಎಲ್ಲಾದರೂ ಕಂಡುಬಂದಲ್ಲಿ 9480805364, 8431723529, 9632656419 ಸಂಖ್ಯೆಗಳಿಗೆ ಕರೆಮಾಡಿ ತಿಳಿಸುವಂತೆ ಮತ್ತು ಈ ವ್ಯಕ್ತಿಯನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಠಾಣೆಯ ಪ್ರಕಟಣೆ ತಿಳಿಸಿದೆ.